ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.
Advertisement
ಪಾರ್ವತಮ್ಮ ಅವರಿಗೆ ಶುಗರ್ ಲೆವೆಲ್ ಕಡಿಮೆ ಆಗಿತ್ತು. ಮಾತ್ರವಲ್ಲದೇ ಅವರಿಗೆ ಯೂರಿನ್ ಇನ್ಫೆಕ್ಷನ್ ಕೂಡ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿದೆ. ಎಲ್ಲಾ ರೀತಿಯ ಟೆಸ್ಟ್ ಗಳನ್ನೂ ಮಾಡಲಾಗಿದೆ. ಮುಂದಿನ ವಾರ ಮತ್ತೆ ಜನರಲ್ ಚೆಕಪ್‍ಗೆ ಬರಲು ತಿಳಿಸಿದ್ದೇವೆ. ಸದ್ಯ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಅಂತಾ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ ಹೇಳಿದ್ದಾರೆ.
Advertisement
Advertisement
ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತಲೆ ಸುತ್ತು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನ ಪುತ್ರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮೊಮ್ಮಗ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
Advertisement
ಡಿಸ್ಚಾರ್ಜ್ ಸಂದರ್ಭದಲ್ಲಿ ಮಂಗಳಾ ರಾಘವೇಂದ್ರ ಮತ್ತು ಕುಟುಂಬದವರು ಜೊತೆಯಿದ್ದರು.
ಇದನ್ನೂ ಓದಿ: ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ- ಜನರಲ್ ವಾರ್ಡ್‍ಗೆ ಶಿಫ್ಟ್