ಪಾರುಲ್ ಯಾದವ್ ಈಗ ಪಾರ್ವತಿ!

Public TV
1 Min Read
Parul Parvati

ಬೆಂಗಳೂರು: ಪ್ಯಾರ್ ಗೆ ಆಗ್ಬಿಟೈತೆ ಅಂತ ಹಾಡುತ್ತಲೇ ಕನ್ನಡ ಚಿತ್ರ ಪ್ರೇಕ್ಷಕರ ಮನಸಿಗೆ ಲಗ್ಗೆಯಿಟ್ಟಿದ್ದವರು ಪಾರೂಲ್ ಯಾದವ್. ಪರಭಾಷಾ ನಟಿಯಾದರೂ ಕನ್ನಡಿಗರಿಗೆ ಹತ್ತಿರವಾಗಿದ್ದ ಅವರು ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗೊಂದಷ್ಟು ಕಾಲದಿಂದ ಕಣ್ಮರೆಯಾದಂತಿದ್ದ ಪಾರುಲ್ ಈಗ ಪಾರ್ವತಿಯ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಖುಷಿಯಲ್ಲಿದ್ದಾರೆ.

ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್ ಫ್ಲೈ. ಈ ಮೂರೂ ಭಾಷೆಗಳಲ್ಲಿ ಆಯಾ ಭಾಷೆಯ ನಟಿಯರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಂಗನಾ ಪಾತ್ರವನ್ನು ಪಾರುಲ್ ಯಾದವ್ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ತಾನು ಪಾರ್ವತಿಯಾಗಿ ಕನ್ನಡದ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿರೋದರ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿರೋ ಪಾರುಲ್, ಪಾರ್ವತಿಯಾಗಿ ತಮ್ಮ ಲುಕ್ಕು ಹೇಗಿದೆ ಎಂಬುದಕ್ಕೆ ಒಂದು ಭಾವಚಿತ್ರವನ್ನೂ ಜಾಹೀರು ಮಾಡಿದ್ದಾರೆ.

parul yadav 5

ತಮಿಳಿನಲ್ಲಿ ಈ ಪಾತ್ರವನ್ನು ಕಾಜಲ್ ನಿರ್ವಹಿಸಿದ್ದಾರೆ. ತೆಲುಗಿನಲ್ಲಿ ಈ ಪಾತ್ರ ಮಿಲ್ಕಿ ಬ್ಯೂಟಿ ತಮನ್ನಾ ಪಾಲಾಗಿದೆ. ಕನ್ನಡದಲ್ಲಿ ಪಾರುಲ್ ಪಾರ್ವತಿಯಾಗಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ಕೇವಲ ನಾಯಕಿ ಮಾತ್ರವಲ್ಲದೇ ಪಾರುಲ್ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕವೇ ಕನ್ನಡದಲ್ಲಿ ತನ್ನ ಮತ್ತೊಂದು ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗೋ ನಿರೀಕ್ಷೆ ಪಾರುಲ್ ಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *