ಗುರುಗ್ರಾಮ: ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಯ ಏಕೀಕರಣದಂತೆಯೇ, ಭಾರತದೊಂದಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿಲೀನವೂ ಸಾಧ್ಯ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುಗ್ರಾಮದಲ್ಲಿ ಬಿಜೆಪಿಯ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಮೂರು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, 1947ರಲ್ಲಿ ನಡೆದ ದೇಶದ ವಿಭಜನೆ ಕುರಿತು ನೋವಿನ ಮಾತುಗಳನ್ನು ಆಡಿದರು. ಭಾರತವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ
Advertisement
Advertisement
ಪೂರ್ವ ಮತ್ತು ಪಶ್ಚಿಮಗಳು ಏಕೀಕರಣದಂತೆಯೇ, ಭಾರತದೊಂದಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿಲೀನವೂ ಸಾಧ್ಯ. ಬಹಳ ಹಿಂದೆಯೇ ಅಂದರೆ 1991ರಲ್ಲಿ ಸಂಭವಿಸಿತ್ತು. ಆದರೆ ಕೆಲವರು ಅದನ್ನು ಕೆಡಿಸಿದರು. ದೇಶದ ವಿಭಜನೆ ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಅಲ್ಪಸಂಖ್ಯಾತ ಸಮುದಾಯದ ಜನರು ಭಯ ಮತ್ತು ಅಭದ್ರತೆಯ ಭಾವನೆ ಬೆಳೆಸಿಕೊಳ್ಳದಂತೆ ಅಲ್ಪಸಂಖ್ಯಾತರನ್ನು ಟ್ಯಾಗ್ ನೀಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮನೋಹರ್ ಲಾಲ್ ಖಟ್ಟರ್, ಹಳೆಯ ಪಕ್ಷವು ಸಂಘದ ಶಕ್ತಿ ಪ್ರದರ್ಶಿಸುವ ಮೂಲಕ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಪಕ್ಷವು ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್