ಗಿಳಿಯೊಂದು ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಕದ್ದು ಆಕಾಶದಲ್ಲಿ ಹಾರಾಡಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಗಿಳಿಯೊಂದು ವ್ಯಕ್ತಿಯೊಬ್ಬರ ಮೊಬೈಲ್ ಫೋನ್‍ನನ್ನು ಕದ್ದು, ವೇಗವಾಗಿ ಹಾರಾಡಿದೆ. ಈ ವೇಳೆ ಮೊಬೈಲ್ ಫೋನ್ ಕ್ಯಾಮೆರಾ ಆನ್ ಆಗಿದ್ದು, ಗಿಳಿ ಹಾರಾಡುವಾಗ ರಸ್ತೆ, ಮನೆಗಳು ಮತ್ತು ಮೇಲ್ಛಾವಣಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಒಂದು ನಿಮಿಷಗಳ ಕಾಲ ಹಾರಾಡಿದ ಗಿಳಿ ಕೊನೆಗೆ ಬಾಲ್ಕನಿಯ ಅಂಚಿನ ಮೇಲೆ ನಿಂತು ಕೊಳ್ಳುತ್ತದೆ. ಆಗ ಜನರು ಗಿಳಿಯನ್ನು ಓಡಿಸಲು ಪ್ರಯತ್ನಿಸಿದ್ದು, ಭಯದಿಂದ ಗಿಳಿ ಮೊಬೈಲ್‍ನನ್ನು ಅಲ್ಲಿಯೇ ಬಿಟ್ಟು ಹೋಗುತ್ತದೆ. ಇದನ್ನೂ ಓದಿ:ಖ್ಯಾತ ತಬಲ ವಾದ್ಯಕಾರ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ
Parrot takes the phone on a fantastic trip. ???????????????? pic.twitter.com/Yjt9IGc124
— Fred Schultz (@fred035schultz) August 24, 2021
ಈ ವೀಡಿಯೋವನ್ನು ಫ್ರೆಡ್ ಎಂಬವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಗಿಳಿ ಮೊಬೈಲ್ ಹಿಡಿದು ಅದ್ಭುತವಾಗಿ ಟ್ರಿಪ್ ಹೊಡೆದಿದೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಈ ವರೆಗೂ 973 ಸಾವಿರ ಮಂದಿ ವೀಕ್ಷಿಸಿದ್ದು, 7000 ರೀ ಟ್ವೀಟ್‍ಗಳು ಬಂದಿದೆ. ಕೆಲವರು ವೀಡಿಯೋ ನೋಡಿ ಇದೊಂದು ಪರಿಸರ ಸ್ನೇಹಿ ಡ್ರೋನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು