ಭೋಪಾಲ್: ಪ್ರಾಣಿ, ಪಕ್ಷಿಗಳನ್ನು ಮನುಷ್ಯನು ಎಷ್ಟು ಹಚ್ಚಿಕೊಂಡು ಪ್ರೀತಿ ಮಾಡುತ್ತಾನೋ ಅಷ್ಟೇ ಪ್ರೀತಿಯನ್ನು ಮೂಕ ಪ್ರಾಣಿಗಳು ಮಾನವರ ಮೇಲೆ ತೋರಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಕಾಡು ಗಿಳಿಯೊಂದು ಶಾಲಾ ವಿದ್ಯಾರ್ಥಿಗಳ ಸ್ನೇಹ ಬೆಳೆಸಿದ್ದು ಮಾತ್ರವಲ್ಲದೇ ಅವರೊಡನೆ ಶಾಲೆಗೂ ಈ ಮುದ್ದಾದ ಗಿಳಿ ಹೋಗುತ್ತಿರುವುದು ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.
ಮಧ್ಯಪ್ರದೇಶದ ಕಾಡು ಗಿಳಿಯೊಂದು ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿದೆ. ವಿದ್ಯಾರ್ಥಿಗಳು ಶಾಲೆಗೆ ಹೊರಟಾಗ ಅವರೊಡನೆ ಈ ಮುದ್ದಾದ ಗಿಳಿಯೂ ಸಹ ಶಾಲೆಗೆ ಹೋಗುತ್ತಿದೆ. ಈ ಅನನ್ಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಗಿಳಿಯು ವಿದ್ಯಾರ್ಥಿಗಳ ಜತೆಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಚೀನಾ+ಪಾಕಿಸ್ತಾನ+ಮಿ.56 ಇಂಚು=ಚೀನಾ ಯೋಧರ ಆಕ್ರಮಣ ಹೆಚ್ಚಳ
Advertisement
Madhya Pradesh | A parrot of Gwalior’s Sharda Balgram forest has developed a unique friendship with children of a nearby school.
“He comes every day when we leave for our school and sits on our shoulder or head, playing with us all the way” says one of the students, Vivek pic.twitter.com/8AloyU84lC
— ANI (@ANI) October 1, 2021
Advertisement
ನಾವು ಶಾಲೆಗೆ ಹೊರಡುವಾಗ ಪ್ರತಿದಿನ ಗಿಳಿ ನಮ್ಮ ಜೊತೆಗೆ ಬರುತ್ತದೆ. ನಮ್ಮ ಹೆಗಲೆ ಮೇಲೆ ಕುಳಿತುಕೊಂಡು ಶಾಲೆಗೆ ಹೋಗುತ್ತದೆ. ಕೆಲವು ಬಾರಿ ನಮ್ಮ ತಲೆಯ ಮೇಲೂ ಕುಳಿತುಕೊಳ್ಳುತ್ತದೆ. ಗಿಳಿಯೊಡನೆ ನಾವು ಹೆಚ್ಚು ಸಂತೋಷವಾಗಿದ್ದೇವೆ ಅದರೊಂದಿಗೆ ಆಡುತ್ತೇವೆ ಹಾಗಾಗಿ ಗಿಳಿ ನಮ್ಮ ಜತೆಯೇ ಇರುತ್ತದೆ ಎಂದು ವಿದ್ಯಾರ್ಥಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Advertisement
As kids reach school, he flies over hills and joins them back on their way to the hostel. This parrot has been visiting them since long. In the hostel, the parrot plays with the students and eats their food: Deepak Bedi, Superintendent, Ram Krishna Vidya Mandir, Gwalior pic.twitter.com/ls0vPm3yTB
— ANI (@ANI) October 1, 2021
Advertisement
ಗಿಳಿ ಮತ್ತು ವಿದ್ಯಾರ್ಥಿಗಳ ಈ ಸ್ನೇಹ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ. ಇದು ಜನ್ಮ ಜನ್ಮದ ಸಂಬಂಧ ಎಂದು ಓರ್ವರು ಹೇಳಿದ್ದಾರೆ. ಇನ್ನೋರ್ವರು ಇವರ ಸ್ನೇಹ ಮೆಚ್ಚಿಗೆಯಾಗುವಂತಿದೆ, ನನಗೆ ಇಷ್ಟವಾಯಿತು ಎಂದು ಹೇಳಿದ್ದಾರೆ. ಗಿಳಿ ವಿದ್ಯಾರ್ಥಿಯ ಭುಜದ ಮೇಲೆ ಕುಳಿತಿರುವ ಫೋಟೋ ತುಂಬಾ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.