Connect with us

ಪೆರೋಲ್ ಮೇಲೆ ಹೊರಬಂದಿದ್ದ ಕೈದಿ ಮಗನೊಂದಿಗೆ ಆತ್ಮಹತ್ಯೆ!

ಪೆರೋಲ್ ಮೇಲೆ ಹೊರಬಂದಿದ್ದ ಕೈದಿ ಮಗನೊಂದಿಗೆ ಆತ್ಮಹತ್ಯೆ!

ನೆಲಮಂಗಲ: ಹತ್ಯೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೋರ್ವ ತನ್ನ ಮಗನೊಂದಿಗೆ ಆತ್ಮಹತ್ಮೆಗೆ ಶರಣಾದ ಘಟನೆ ಬೆಂಗಳೂರು ಹೊರವಲಯ ಬಾಗಲಗುಂಟೆ ಪೊಲಿಸ್ ಠಾಣಾ ವ್ಯಾಪ್ತಿಯ ಶೆಟ್ಟಿ ಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಶ್ರೀಧರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ನಿನ್ನೆ ತನ್ನ 13 ವರ್ಷದ ಮಗ ಶ್ರೀ ವಿಷ್ಣು ಜೊತೆ ನೇಣಿಗೆ ಶರಣಾಗಿದ್ದಾನೆ.

ಮೃತ ಶ್ರೀಧರ್ ಕುಮಾರ್ ಶ್ರೀಧರ್ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ಕನ ಗಂಡನನ್ನು ಹತ್ಯೆ ಮಾಡಿ ಕೋಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದನು. ಪ್ರಕರಣ ಸಂಬಂಧ 14 ವರ್ಷ ಜೈಲು ಶಿಕ್ಷೆಯಾಗಿತ್ತು. ಅದರಲ್ಲಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗೆ ಪೇರೊಲ್ ಮೇಲೆ ಹೊರಗಡೆಗೆ ಬಂದಿದ್ದ ಎನ್ನಲಾಗಿದೆ. ಆ ಬಳಿಕ ಈತ ಬಾಗಲಗುಂಟೆ ಶೆಟ್ಟಿ ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಇದೀಗ ಬಾಗಲಗುಂಟೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement