ಬೆಂಗಳೂರು: ನೈಜ ಘಟನೆಯನ್ನು ಆಧಾರಿಸಿದ ತುಳು ಹಾರರ್ ಚಿತ್ರ ‘ಪರೋಕ್ಷ್’ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೃಶ್ಯಂ ಫಿಲ್ಮ್ ನವರು ಈ ಚಿತ್ರವನ್ನು ನಿರ್ಮಿಸಿದ್ದು, ಏಪ್ರಿಲ್ 12ರಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ 12 ನಿಮಿಷದ ಕಿರು ಚಿತ್ರವನ್ನು 3.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರೆ, ಯೂ ಟ್ಯೂಬ್‍ನಲ್ಲಿ 2.85 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Advertisement
ಗಣೇಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತ್ ಸಿಯಲ್, ಪೂಜಾ ಉಪಾಸನ, ಯತೀನ್ ಮುಂತಾದವರು ಅಭಿನಯಿಸಿದ್ದಾರೆ. ತುಳು ಚಿತ್ರವಾದರೂ ಇಂಗ್ಲಿಷ್‍ನಲ್ಲಿ ಸಬ್ ಟೈಟಲ್ ಹಾಕಲಾಗಿದೆ.
Advertisement
ಚಿತ್ರದ ಕಥೆ ಏನು?
ತೆಂಗಿನ ಮರದಲ್ಲಿ ಮಗು ಆಳುತ್ತಿರುವ ಧ್ವನಿ ಕೇಳುತ್ತಿರುತ್ತದೆ. ಯಾವುದೇ ಅತೀಂದ್ರಿಯ ಶಕ್ತಿ ತೆಂಗಿನ ಮರದಲ್ಲಿ ಇದೆ ಎಂದು ಭಾವಿಸಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ಅಷ್ಟೇ ಅಲ್ಲದೇ ಮಂತ್ರವಾದಿಯನ್ನು ಕರೆಸಿ ಅತೀಂದ್ರಿಯ ಶಕ್ತಿಯನ್ನು ಹೋಗಲಾಡಿಸಲು ಪ್ರಯತ್ನವನ್ನು ನಡೆಸಲಾಗುತ್ತದೆ. ಆದರೆ ಕೊನೆಯಲ್ಲಿ ಧ್ವನಿಯ ರಹಸ್ಯ ಬಯಲಾಗುತ್ತದೆ.
Advertisement
ಈ ಚಿತ್ರವನ್ನು ವೀಕ್ಷಿಸಿದ ಬಳಿಕ ಫೇಸ್‍ಬುಕ್‍ನಲ್ಲಿ ಜನ ತುಂಬಾ ಸರಳವಾಗಿರುವ ಕಥಾವಸ್ತುವನ್ನು ಚೆನ್ನಾಗಿ ನಿರೂಪಣೆ ಮಾಡಲಾಗಿದೆ. 12 ನಿಮಿಷದಲ್ಲಿ ಪ್ರತಿ ಕ್ಷಣವೂ ಕುತೂಹಲವನ್ನು ಹುಟ್ಟಿಸುತ್ತಾ ಹೋಗುತ್ತದೆ ಎಂದು ಎಂದು ಹೊಗಳಿ ಕಮೆಂಟ್ ಹಾಕಿದ್ದಾರೆ.