ನವದೆಹಲಿ: ದೇಶದ ಪ್ರತೀ ಜಿಲ್ಲೆಗಳಲ್ಲೂ ಕನಿಷ್ಟ 1 ಮಹಿಳಾ ಪೊಲೀಸ್ ಠಾಣೆಯನ್ನು ರಚಿಸಲು ಸಂಸದೀಯ ಸಮಿತಿ ಶಿಫಾರಸ್ಸು ಮಾಡಿದೆ.
ದೇಶದ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆ ಇದೆ. ದೇಶಾದ್ಯಂತ ಶೇ.10.3 ರಷ್ಟು ಮಾತ್ರವೇ ಮಹಿಳಾ ಪೊಲೀಸರು ಇದ್ದಾರೆ. ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.
Advertisement
ದೇಶದಲ್ಲಿ ಮಹಿಳಾ ಪೊಲೀಸ್ ಪಡೆಯಲ್ಲಿ ಶೇ.33 ರ ವರೆಗೆ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಾರ್ಗಸೂಚಿ ರೂಪಿಸಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಏರ್ ಶೋನಲ್ಲಿ ಭಾಗಿಯಾಗಲಿದೆ ತೇಜಸ್ ಫೈಟರ್ ಜೆಟ್
Advertisement
Advertisement
ಪೊಲೀಸ್ ಪಡೆಯಲ್ಲಿ ಶೇ.10.3 ರಷ್ಟು ಮಹಿಳೆಯರು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಬೇಕು ಎಂದು ಸಮಿತಿ ತಿಳಿಸಿದೆ. ಇದನ್ನೂ ಓದಿ: ಭಾರತ್ ಬಜಾಜ್ ಆಟೋ ಅಧ್ಯಕ್ಷ ರಾಹುಲ್ ಬಜಾಜ್ ನಿಧನ
Advertisement
ಪುರುಷ ಕಾನ್‌ಸ್ಟೆಬಲ್‌ಗಳ ಖಾಲಿ ಹುದ್ದೆಗಳನ್ನು ರೂಪಿಸುವ ಬದಲು ಹೆಚ್ಚುವರಿ ಹುದ್ದೆಗಳನ್ನು ರಚಿಸಿ ಮಹಿಳಾ ಪೊಲೀಸರನ್ನು ನೇಮಕಾತಿ ಮಾಡಬಹುದು. ಇದರಿಂದ ದೇಶದಲ್ಲಿ ಪೊಲೀಸರ ಲಿಂಗಾನುಪಾತ ಸುಧಾರಿಸಲು ಸಹಾಯವಾಗುತ್ತದೆ ಎಂದು ಸಮಿತಿ ಹೇಳಿದೆ.