ನವದೆಹಲಿ : ಚಳಿಗಾಲದ ಸಂಸತ್ ಅಧಿವೇಶನವೂ (Parliament Session) ಡಿಸೆಂಬರ್ 4ರಿಂದ ಆರಂಭಗೊಂಡು 22ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಲಾಯದಿಂದ ಮಾಹಿತಿ ಲಭ್ಯವಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 2 ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಸುಗಮ ಕಲಾಪಕ್ಕಾಗಿ ಪ್ರತಿಪಕ್ಷಗಳ ಜೊತೆಗೆ ಮಾತುಕತೆ ನಡೆಯಲಿದೆ.
ಡಿಸೆಂಬರ್ ಮೂರರಂದು ಪ್ರತಿಪಕ್ಷಗಳ ಸಭೆ ನಡೆಯಬೇಕಿತ್ತು ಅಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆ ಒಂದು ದಿನ ಮುನ್ನ ಅಂದರೆ ಡಿಸೆಂಬರ್ 2 ರಂದು ಸಭೆ ನಡೆಸಲು ನಿರ್ಧರಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾಹಿತಿಯನ್ನು ಖಚಿತಪಡಿಸಿದ್ದಾರೆ.
Advertisement
Advertisement
ಈ ಬಾರಿಯ ಅಧಿವೇಶನದಲ್ಲಿ ಮಹತ್ವದ IPC, CrPC ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸಲು ಬಯಸುವ ಮೂರು ಪ್ರಮುಖ ಮಸೂದೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಈ ಮಸೂದೆಗಳನ್ನು ಗೃಹ ವ್ಯವಹಾರಗಳ ಸಂಸದೀಯ ಸಮಿತಿಯು ಪರಿಶೀಲಿಸುತ್ತಿದೆ. ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಅಂಗೀಕರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ರೈತ ಬಂಧು ಯೋಜನೆ ಮುಂದೂಡುವಂತೆ ತೆಲಂಗಾಣ ಸರ್ಕಾರಕ್ಕೆ ಚು.ಆಯೋಗ ಸೂಚನೆ
Advertisement
Advertisement
ಈಗಾಗಲೇ ಲೋಕಸಭೆಯಲ್ಲಿ (Loksabhe) ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಮಸೂದೆ-2023, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ-2023 ಮತ್ತು ಇಂಡಿಯನ್ ಎವಿಡನ್ಸ್ ಆ್ಯಕ್ಟ್ (ಭಾರತೀಯ ಸಾಕ್ಷ್ಯ ಕಾಯ್ದೆ) ಬದಲಿಗೆ ಭಾರತೀಯ ಸಾಕ್ಷ್ಯ ಮಸೂದೆ 2023 ಅನ್ನು ಕೇಂದ್ರ ಸಚಿವಾಲಯವು ಮಂಡಿಸಿದೆ. ಮೂರು ಕಾಯ್ದೆಗಳಲ್ಲಿ 300ಕ್ಕೂ ಹೆಚ್ಚು ಬದಲಾವಣೆಗಳನ್ನು ನೂತನ ಮಸೂದೆಗಳಲ್ಲಿ ತರಲಾಗಿದೆ.
ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ (Mahua Moitra) ವಿರುದ್ಧದ “ಪ್ರಶ್ನೆಗಾಗಿ ನಗದು” ಆರೋಪದ ಕುರಿತು ನೈತಿಕ ಸಮಿತಿಯ ವರದಿಯನ್ನು ಚರ್ಚಿಸುವ ಸಾಧ್ಯತೆಯಿದೆ. ಸಮಿತಿಯು ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡಿದೆ, ಇದು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಮರಕ್ಕೆ ವೇದಿಕೆಯಾಗುವ ನಿರೀಕ್ಷೆಗಳಿದೆ. ಇದಲ್ಲದೇ ಮಣಿಪುರದಲ್ಲಿ ನಿಯಂತ್ರಣಕ್ಕೆ ಬಾರದ ಕಾನೂನು ಸುವ್ಯವಸ್ಥೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ.