– ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆಯೇ ಇಲ್ಲದ ಮೇಲೆ ಏಕೆ ಸ್ಪರ್ಧಿಸ್ತೀರಿ?
– ಸಂಸತ್ತಿನಲ್ಲಿ ಅಮಿತ್ ಶಾ ಅಬ್ಬರದ ಭಾಷಣ
ನವದೆಹಲಿ: ಮತಪಟ್ಟಿ ಪರಿಷ್ಕರಣೆ ಬಗ್ಗೆ ಲೋಕಸಭೆಯಲ್ಲಿ ಇಂದು ಗೃಹ ಸಚಿವ ಅಮಿತ್ ಶಾ (Amit Shah) ರೋಷಾವೇಶದಲ್ಲಿ ಅಬ್ಬರಿಸಿದರು. ಚುನಾವಣಾ ಆಯೋಗದ (Election Commission) ಜೊತೆ ಸೇರಿ ಬಿಜೆಪಿ ಮತ ಕಳವು ಮಾಡ್ತಿದೆ ಅಂದಿದ್ದ ರಾಹುಲ್ ಗಾಂಧಿ ಟೀಕೆಗೆ ಅಮಿತ್ ಶಾ ಕೌಂಟರ್ ಕೊಟ್ಟರು.
ದುರ್ಬಲ ನಾಯಕತ್ವದಿಂದ ಸೋಲು
ಮತ ಕಳವು ಪ್ರಕರಣದಲ್ಲಿ ಎ1 ನೆಹರು, ಎ2 ಇಂದಿರಾ ಹಾಗೂ ಎ3 ಸೋನಿಯಾ ಗಾಂಧಿ ಅಂತ ಗುಡುಗಿದರು. ಕಾಂಗ್ರೆಸಿಗರು ಸೋತಾಗಷ್ಟೇ ಮತಪಟ್ಟಿ-ಇವಿಎಂಗಳಲ್ಲಿ ದೋಷವೇ? ಇವಿಎಂ-ವಿವಿಪ್ಯಾಟ್‌ಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ದುರ್ಬಲ ನಾಯಕತ್ವದಿಂದ ಕಾಂಗ್ರೆಸ್ ಸೋಲುತಿದೆ ಅಂತ ಪಂಚ್ ಕೊಟ್ಟರು.
VIDEO | Parliament Winter Session: “Rahul Gandhi ji dropped a ‘nuclear bomb’ in his press conference on 5 November 2025, claiming that during the Haryana elections, 501 votes were cast from a single house. The Election Commission later clarified that House Number 265 is not a… pic.twitter.com/g34X3noTcf
— Press Trust of India (@PTI_News) December 10, 2025
ವಿಪಕ್ಷಗಳು ಎಸ್‌ಐಆರ್ ಬಗ್ಗೆ ದಾರಿ ತಪ್ಪಿಸ್ತಿವೆ. ವಾಸ್ತವ ಅಂಶಗಳನ್ನು ತಿರುಚುತಿವೆ. ರಾಹುಲ್ ಗಾಂಧಿಯ (Rahul Gandhi) ಮಾತು ಸಂಪೂರ್ಣ ಗೊಂದಲವಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆಯೇ ಇಲ್ಲದ ಮೇಲೆ ಏಕೆ ಸ್ಪರ್ಧಿಸ್ತೀರಿ? ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿ ನ್ಯಾಯಸಮ್ಮತವಲ್ಲದ ಚುನಾವಣೆಯಲ್ಲಿ ಗೆದ್ದಿದ್ದರು. ಮತಕಳವಿಗೆ ತೆರೆಬಿದ್ದಿದ್ದಕ್ಕೆ ವಿಪಕ್ಷಗಳು ನಿರಾಸೆಗೊಂಡಿವೆ ಎಂದು ತಿವಿದರು. ಇದನ್ನೂ ಓದಿ: ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್ ದುಬೆ
ಹರಿಯಾಣದ ಒಂದೇ ಮನೆಯಲ್ಲಿ ಜಾಸ್ತಿಸಂಖ್ಯೆಯಲ್ಲಿ ವೋಟರ್ಸ್ ಇದ್ದಾರೆ ಅನ್ನೋ ರಾಹುಲ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ಕೊಟ್ಟರು. ಈ ವೇಳೆ, ಆಕ್ಷೇಪಿಸಿದ ರಾಹುಲ್ ಗಾಂಧಿ, ನಾನು ನಡೆಸಿರುವ 3 ಸುದ್ದಿಗೋಷ್ಠಿಗಳ ಡೇಟಾ ಬಗ್ಗೆ ಓಪನ್ ಡಿಬೇಟ್ ಮಾಡೋಣ ಅಂತ ಚಾಲೆಂಜ್ ಮಾಡಿದ್ರು. ಇದಕ್ಕೆ ನಿಮ್ಮ ಇಷ್ಟದಂತೆ ಸಂಸತ್ತು ನಡೆಯಲ್ಲ ಅಂತ ಅಮಿತ್ ಶಾ ಕೌಂಟರ್ ಕೊಟ್ಟರು.
ಮುಂದುವರಿದು… ಬಿಜೆಪಿ ಮತ್ತು ಎನ್‌ಡಿಎ ಚರ್ಚೆಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನ್ಯಾಯಯುತ ಚುನಾವಣೆಗಳನ್ನ ನಡೆಸುವ ಜವಾಬ್ದಾರಿಯನ್ನ ಚುನಾವಣಾ ಆಯೋಗ ಹೊಂದಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗವೂ ಹೊಂದಿದೆ ಎಂದು ಅಮಿತ್ ಶಾ ಹೇಳಿದರು. ಇದನ್ನೂ ಓದಿ: ಮತ ಕಳ್ಳತನಕ್ಕಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ: ರಾಹುಲ್
325ನೇ ವಿಧಿಯು ಯಾವುದೇ ಅರ್ಹ ಮತದಾರರನ್ನ ಪಟ್ಟಿಯಿಂದ ಹೊರಗಿಡುವುದನ್ನ ನಿಷೇಧಿಸುತ್ತದೆ. ಮತದಾರರ ಮಾನದಂಡಗಳು 326ನೇ ವಿಧಿಯಲ್ಲಿವೆ. ಮೊದಲ ಅವಶ್ಯಕತೆಯೆಂದರೆ ಮತದಾರನು ಭಾರತೀಯ ಪ್ರಜೆಯಾಗಿರಬೇಕು. 2ನೇಯದು ಅವರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಚುನಾವಣಾ ಆಯೋಗವು ಈ ಎಲ್ಲಾ ಅರ್ಹತಾ ಮಾನದಂಡಗಳನ್ನ ಪರಿಶೀಲಿಸುವ ಮತ್ತು ಶಾಸನ ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ. ಸಂವಿಧಾನವು ಅವರಿಗೆ ಸಂಪೂರ್ಣ ಅಧಿಕಾರ ನೀಡಿರುವುದರಿಂದ ಚುನಾವಣೆ ಮಾಡುವ ಅಧಿಕಾರ ತಮಗೆ ಇಲ್ಲ ಎಂದು ಕುಟುಕಿದರು. ಇದನ್ನೂ ಓದಿ: CIC ಆಯ್ಕೆ| ಮೋದಿ, ಶಾ ಜೊತೆ ಸಭೆ – ಸರ್ಕಾರ ಪ್ರಸ್ತಾಪಿಸಿದ ಹೆಸರುಗಳಿಗೆ ರಾಹುಲ್ ಆಕ್ಷೇಪ
ಈ ಮಧ್ಯೆ, ಕೇಂದ್ರ ಸಚಿವ, ಕೇರಳದ ಸುರೇಶ್ ಗೋಪಿಗೆ ಎರಡೆರಡು ಕಡೆ ಮತದಾನದ ಹಕ್ಕು ಇದೆ ಅಂತ ಸಿಪಿಐ ನಾಯಕ ವಿ.ಎಸ್ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಕೇರಳ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಡೆದ ಮೊದಲ ಹಂತದ ವೋಟಿಂಗ್‌ನಲ್ಲಿ ಸುರೇಶ್ ಗೋಪಿ ತಿರುವನಂತಪುರದಲ್ಲಿ ಮತ ಚಲಾಯಿಸಿದ್ರು. ಆದ್ರೆ 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಮತದಾನ ಮಾಡಿದ್ದರು ಅಂದಿದ್ದಾರೆ.


