ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ (Budget Session) ಮೊದಲ ಭಾಗವು ಇದೇ ಜನವರಿ 31 ಮತ್ತು ಫೆಬ್ರವರಿ 13ರ ನಡುವೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆ.1ರಂದು ತಮ್ಮ ದಾಖಲೆಯ 8ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ.
Advertisement
ಜ.31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ. ಬಳಿಕ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಇನ್ನೂ ಬಜೆಟ್ ಅಧಿವೇಶನದ 2ನೇ ಭಾಗವು ಮಾರ್ಚ್ 10 ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ
Advertisement
Advertisement
ಅಧಿವೇಶನದ ಮೊದಲ ಭಾಗವು ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯಿಂದ ಆರಂಭವಾಗಲಿದೆ. ಹಾಗೂ ಸಂಸತ್ತಿನ ಎರಡೂ ಸದನಗಳಲ್ಲಿ ಪ್ರಧಾನಮಂತ್ರಿ ಅವರ ಉತ್ತರದೊಂದಿಗೆ ಅಧಿವೇಶನ ಕೊನೆಗೊಳ್ಳುತ್ತದೆ. ಇದನ್ನೂ ಓದಿ: ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ