ನವದೆಹಲಿ: 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ರಾಗಾ ತಮ್ಮ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಹೌದು. 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಹೆಗಲ ಮೇಲೆ ಮಹತ್ವದ ಜವಾಬ್ದಾರಿ ಇದೆ. ಮಂಗಳವಾರ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮನೆಯಲ್ಲಿ ಭಾರತ ಒಕ್ಕೂಟದ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಜವಾಬ್ದಾರಿ ವಹಿಸಿಕೊಂಡ ನಂತರ ರಾಹುಲ್ ಗಾಂಧಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ.
Advertisement
Advertisement
ಇಂದು ಸದನದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಔಪಚಾರಿಕವಾಗಿ ಕುರ್ತಾ ಮತ್ತು ಪೈಜಾಮ ಧರಿಸುವ ಮೂಲಕ ಮಿಂಚಿದ್ದಾರೆ. ಸಾಮಾನ್ಯವಾಗಿ ರಾಹುಲ್ ಗಾಂಧಿಯವರು ಹೆಚ್ಚಾಗಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆಯೂ ರಾಹುಲ್ ಗಾಂಧಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್ ಧರಿಸೋ ಹಿಂದಿನ ಸೀಕ್ರೆಟ್ ರಿವೀಲ್
Advertisement
Advertisement
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಹೆಚ್ಚಾಗಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಗಾಂಧಿ ಯಾವಾಗಲೂ ಬಿಳಿ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಾನು ಯಾಕೆ ಬಿಳಿ ಬಣ್ಣವನ್ನು ಆಯ್ದುಕೊಳ್ಳುತ್ತೇನೆ ಎಂಬುದಕ್ಕೆ ಕಾರಣವನ್ನು ಕೂಡ ನೀಡಿದ್ದರು. ನನಗೆ ಬಿಳಿ ಟಿ-ಶರ್ಟ್ ಪಾರದರ್ಶಕತೆ, ದೃಢತೆ ಮತ್ತು ಸರಳತೆಯ ಸಂಕೇತವಾಗಿದೆ ಎಂದಿದ್ದರು.
2023ರ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕುರ್ತಾ ಮತ್ತು ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅಂದರೆ 2022ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಕುರ್ತಾ ಮತ್ತು ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು.