– ಕಳೆದ ವರ್ಷ ಸಂಸತ್ ಮೇಲೆ ದಾಳಿ ನಡೆಸಿದ್ದ ಆರೋಪಿಗಳು
– ಮೈಸೂರಿನ ಮನೋರಂಜನ್ ಪ್ರಮುಖ ಸಂಚುಕೋರ
ನವದೆಹಲಿ: ಸಂಸತ್ ಮೇಲೆ ದಾಳಿ ನಡೆಸಲು (Parliament Security Breach) ಸಂಚು ರೂಪಿಸಿದ್ದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಬಯಸಿದ್ದರು ಎಂಬ ಸ್ಫೋಟಕ ಅಂಶ ಈಗ ಬಯಲಾಗಿದೆ.
ಸಂಸತ್‌ನಲ್ಲಿ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 1 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ,
Advertisement
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಭಾರತದ (India) ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಂಬಿದ್ದ ಆರೋಪಿಗಳು ಅದನ್ನು ಬದಲಿಸಬೇಕು ಎನ್ನುವ ಉದ್ದೇಶ ಹೊಂದಿದ್ದರು. 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದು ಅದನ್ನು ಕಾರ್ಯಗತಗೊಳಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ತಮ್ಮ ನಡೆಯನ್ನು ಯೋಜಿಸಿದ್ದರು. ಇದನ್ನೂ ಓದಿ: MUDA Scam | ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯದಲ್ಲಿ ಅಸಲಿ ಗೇಮ್ ಶುರು?
Advertisement
Advertisement
ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಸ್ನೇಹಿತರಾಗಿದ್ದ ಇವರು ಮೈಸೂರು, ಗುರುಗ್ರಾಮ, ದೆಹಲಿ ಸೇರಿ ಐದು ಕಡೆ ಸಭೆ ನಡೆಸಿ ಸಂಸತ್ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು. ಈ ಮೂಲಕ ಶೀಘ್ರದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆಯಲು ಬಯಸಿದ್ದರು.
Advertisement
ಮೈಸೂರಿನ ಮನೋರಂಜನ್ (Mysuru Manoranjan) ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಮೈಸೂರಿನಲ್ಲೇ ಮನೋರಂಜನ್ ನೇತೃತ್ವದಲ್ಲಿ ಮೊದಲ ಸಭೆ ನಡೆದಿತ್ತು. ಮೊದಲ ಸಭೆಯಲ್ಲಿ ಹತ್ತು ಮಂದಿ ಭಾಗಿಯಾಗಿದ್ದರು.
ಸಭೆಯಲ್ಲಿ ಹಿಂಸಾತ್ಮಕ ವಿಡಿಯೋ ತೋರಿಸಿ, ಪ್ರತ್ಯೇಕ ಸಂಘಟನೆ ಹುಟ್ಟುಹಾಕುವ ಯೋಜನೆಯನ್ನು ಮನೋರಂಜನ್ ವಿವರಿಸಿದ್ದ. ಎರಡನೇ ಸಭೆಯನ್ನು ಹರ್ಯಾಣದ ಗುರುಗ್ರಾಮದಲ್ಲಿ ನಡೆಸಲಾಗಿತ್ತು. ಇದರಲ್ಲಿ ಏಳು ಮಂದಿ ಭಾಗಿಯಾಗಿದ್ದರು. ಕಾನೂನು ಉಲ್ಲಂಘನೆಯಾಗುವ ಭೀತಿಯಲ್ಲಿ ಮೊದಲ ಸಭೆಯಲ್ಲಿದ್ದ ಮೂವರು ಎರಡನೇ ಸಭೆಗೆ ಗೈರಾಗಿದ್ದರು.
ತಂಡಕ್ಕೆ ಮಹಿಳೆಯರನ್ನು ಸೇರಿಕೊಳ್ಳುವ ಉದ್ದೇಶದಿಂದ ನೀಲಂಳನ್ನು ಸೇರಿಸಿಕೊಳ್ಳಲಾಗಿತ್ತು. ಬಳಿಕ ದೆಹಲಿಯಲ್ಲಿ ಮೂರನೇ ಸಭೆ ನಡೆಸಿದ್ದರು. ಕಡೆಯದಾಗಿ ಇಂಡಿಯಾ ಗೇಟ್ ಬಳಿ ಸೇರಿ ಅಲ್ಲಿಂದ ಸ್ಮೋಗ್ ಕ್ಯಾನ್ ಬಳಸಿ ದಾಳಿ ಮಾಡಲು ಸಂಸತ್ ಗೆ ತೆರಳಿದ್ದರು. ಇದನ್ನೂ ಓದಿ: ಅಕ್ಕಿ ಕೊಡ್ತೀವಿ ಅಂದ್ರೂ ರಾಜ್ಯ ಸರ್ಕಾರ ತಗೋತಿಲ್ಲ – ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ಅಲ್ಟ್ರಾ ಮಾವೋವಾದಿ-ಪ್ರೇರಿತ ಚಿಂತನೆಯಿಂದ ಪ್ರಚೋದನೆಗೆ ಒಳಗಾಗಿದ್ದ ಮನೋರಂಜನ್ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದ್ದ. ಅರ್ಧದಲ್ಲೇ ಎಂಜಿನಿಯರಿಂಗ್ ಕೋರ್ಸ್ ಬಿಟ್ಟಿದ್ದ ಮನೋರಂಜನ್ 2014 ರಲ್ಲಿ ಕಾಂಬೋಡಿಯಾಗೆ ಪ್ರಯಾಣ ಬೆಳೆಸಿ ಅಲ್ಲಿ 8 ತಿಂಗಳು ತಂಗಿದ್ದ.
ಭಾರತಕ್ಕೆ ಮರಳಿದ ನಂತರ 2015 ರಲ್ಲಿ ಮೋಟಾರ್‌ಸೈಕಲ್‌ನಲ್ಲಿ ಲಡಾಖ್‌ಗೆ ಪ್ರಯಾಣಿಸಿದ್ದ. ಲಡಾಖ್ ಪ್ರವಾಸದ ಸಮಯದಲ್ಲಿ ಹೈದರಾಬಾದ್‌ನಲ್ಲಿ ಓದುತ್ತಿದ್ದ ಒಬ್ಬ ಚೀನೀ ವಿದ್ಯಾರ್ಥಿಯ ಸ್ನೇಹವಾಗುತ್ತದೆ. ಅತನ ಜೊತೆ ದೆಹಲಿಯವರೆಗೆ ಮನೋರಂಜನ್ ಸವಾರಿ ಮಾಡಿದ್ದ.
ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಅವರನ್ನು ದಾಳಿ ಮಾಡಿದ ದಿನವಾದ 2013ರ ಡಿ.13 ರಂದು ಬಂಧಿಸಲಾಗಿತ್ತು. ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ಕ್ರಮವಾಗಿ ಡಿಸೆಂಬರ್ 15 ಮತ್ತು 16 ರಂದು ಬಂಧಿಸಲಾಯಿತು. ಎಲ್ಲಾ ಆರೋಪಿಗಳು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ 16 ಮತ್ತು 18 ರ ಅಡಿಯಲ್ಲಿ ದೆಹಲಿ ಪೋಲೀಸ್‌ನ ಭಯೋತ್ಪಾದನಾ-ವಿರೋಧಿ ಘಟಕ, ಸ್ಪೆಷಲ್ ಸೆಲ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.