– ಮಗ ಯತೀಂದ್ರಗಾಗಿ ಸಿಎಂ ಷಡ್ಯಂತ್ರ ಆರೋಪ
ನವದೆಹಲಿ: ಸಂಸತ್‍ನಲ್ಲಿ (Security breach in Lok Sabha) ದಾಂಧಲೆ ಎಬ್ಬಿಸಿದ್ದವರ ಆತಂಕಕಾರಿ ಪ್ರವರಗಳು, ಪ್ಲಾನ್‍ಗಳು ಈಗ ಒಂದೊಂದೇ ಬಯಲಾಗ್ತಿವೆ.
ಸಂಚುಕೋರರು ತಮ್ಮ ಸಂದೇಶಗಳನ್ನು ಸರ್ಕಾರಕ್ಕೆ ತಲುಪಿಸಲು ಹಲವು ಪ್ಲಾನ್‍ಗಳನ್ನು ಮಾಡಿದ್ರು. ಮೊದಲು ಮೈಗೆ ಫೈರ್ ಪ್ರೂಫ್ ಜೆಲ್ (Fire Proof Gel) ಲೇಪಿಸಿಕೊಂಡು ಸಂಸತ್ ಮುಂದೆ ಬೆಂಕಿ ಹಚ್ಚಿಕೊಳ್ಳಲು ಯೋಜಿಸಿದ್ರು. ಇದಕ್ಕಾಗಿ ಆನ್‍ಲೈನ್‍ನಲ್ಲಿ ಜೆಲ್ ಖರೀದಿ ಸಾಧ್ಯವಾಗದ ಕಾರಣ ಅದನ್ನು ಕೈಬಿಟ್ರು ಎನ್ನಲಾಗಿದೆ. ಈಗಿರುವ ರಾಜಕೀಯ ಪಕ್ಷಗಳ ಸಿದ್ದಾಂತಗಳು ಹೊಂದಿಕೆಯಾಗದ ಕಾರಣ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆಯೂ ಸಂಚುಕೊರರು ಚಿಂತನೆ ನಡೆಸಿದ್ರು.
Advertisement
Advertisement
ಇತ್ತ ಮೈಸೂರಿನಲ್ಲಿ, ನಗರ ಬಿಟ್ಟು ಎಲ್ಲಿಗೂ ಹೋಗಬಾರದು. ಎಲ್ಲಾ ಕರೆಗಳ ಮಾಹಿತಿ ನೀಡಿ ಎಂದು ಮನೋರಂಜನ್ ಪೋಷಕರಿಗೆ ತನಿಖಾ ತಂಡ ತಿಳಿಸಿದೆ. ಈ ಮಧ್ಯೆ ಆರೋಪಿಗಳಿಗೆ ವಿಸಿಟರ್ಸ್ ಪಾಸ್ ಕೊಟ್ಟಿದ್ದ ಸಂಸದ ಪ್ರತಾಪ್‍ಸಿಂಹ ಹೇಳಿಕೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ ಕೇಸ್ – ಭಾರತಕ್ಕೆ ಬೇಕಾಗಿರುವುದು ಬಾಂಬ್ ಎಂದು ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದ ಮಾಸ್ಟರ್‌ಮೈಂಡ್
Advertisement
Advertisement
ಒಟ್ಟಿನಲ್ಲಿ ಸಂಸತ್ ದಾಳಿ ಪ್ರಕರಣದಲ್ಲಿ ರಾಜಕೀಯ ಮುಂದುವರಿದಿದೆ. ಈ ಪ್ರಕರಣದಲ್ಲಿ ಪ್ರತಾಪ್‍ಸಿಂಹರನ್ನು ಸಿಲುಕಿಸುವ ಷಡ್ಯಂತ್ರ್ಯವನ್ನು ಕಾಂಗ್ರೆಸ್ ನಡೆಸಿದೆ ಎಂದು ಬಿಜೆಪಿಯ ಲೆಹರ್ ಸಿಂಗ್ ಆರೋಪಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುವ ಪ್ರಯತ್ನಗಳು ನಡೆದಿವೆ. ಇದರ ಭಾಗವಾಗಿಯೇ ಪ್ರತಾಪ್ ಸಿಂಹರನ್ನು ಸಿಲುಕಿಸುವ ಸಂಚು ನಡೆದಿದೆ ಎಂದು ಆಪಾದಿಸಿದ್ದಾರೆ. ರಾಜ್ಯದಲ್ಲಿ ನಗರ ನಕ್ಸಲರನ್ನು ಸರ್ಕಾರ ಪೋಷಿಸುತ್ತಿದೆ ಎಂಬ ಆರೋಪವನ್ನು ಲೆಹರ್ ಸಿಂಗ್ ಮಾಡಿದ್ದಾರೆ. ಆದರೆ ಈ ಆರೋಪವನ್ನು ಸಿಎಂ ತಳ್ಳಿ ಹಾಕಿದ್ದಾರೆ.