ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ಮಾಫಿಯಾ ನಡೆಯುತ್ತಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಾಗ ಬಿಬಿಎಂಪಿಯದ್ದು ಆದ್ರೆ ವಸೂಲಿ ಮಾಡೋದು ಮಾತ್ರ ದಂಧೆಕೋರರು.
ಹೌದು. ಬಿಬಿಎಂಪಿ ಜಾಗದಲ್ಲಿ 1 ಗಂಟೆ ಕಾಲ ಬೈಕ್ ನಿಲ್ಲಿಸಲು 50 ರೂ., ಕಾರಿಗೆ 100 ರೂ. ಕೊಡಬೇಕು. ರಾಜಾರೋಷವಾಗಿ ಜನರಿಂದ ಸುಲಿಗೆ ನಡೆಯುತ್ತಿದ್ರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಬ್ಲಿಕ್ ಟಿವಿ ವರದಿಗಾರರು ಸುದ್ದಿ ಮಾಡಲು ಮುಂದಾದಾಗ ದಂಧೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದು, ಕಳ್ಳದಾರಿಯಿಂದ ವಸೂಲಿಗಾರ ಎಸ್ಕೇಪ್ ಆಗಿದ್ದಾನೆ.
Advertisement
Advertisement
ಎಸ್‍ಕೆಎ ಹೆಸರಲ್ಲಿ ಎಡ್ವರ್ಡ್ ಎಂಬಾತನಿಂದ ಈ ಪಾರ್ಕಿಂಗ್ ದಂಧೆ ನಡೆಯುತ್ತಿದ್ದು, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲೂ ಮಾಫಿಯಾ ನಡೆಯುತ್ತಿದೆ. ಈ ಕುರಿತು ವರದಿ ಮಾಡಲು ಪಬ್ಲಿಕ್ ಟಿವಿ ಮುಂದಾದಾಗ ಕ್ಯಾಮರಾಮ್ಯಾನ್ ಮೇಲೆ ಹಲ್ಲೆ ನಡೆಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews