ವಾಷಿಂಗ್ಟನ್: ಸೂರ್ಯನ ಅಧ್ಯಯನ ನಡೆಸಲು ಇಂದು ಉಡಾವಣೆಯಾಗಬೇಕಿದ್ದ ನಾಸಾದ ಸೋಲಾರ್ ಪ್ರೋಬೋ ನೌಕೆಯ ಉಡಾವಣೆ ಮುಂದೂಡಿಕೆಯಾಗಿದೆ.
ಭಾರತೀಯ ಕಾಲಮಾನ ಮಧ್ಯಾಹ್ನ 1.03ಕ್ಕೆ ಈ ನೌಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕೆನವೆರಲ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಬೇಕಿತ್ತು. ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು ಹೊತ್ತುಕೊಂಡು ಸಾಗಬೇಕಿತ್ತು.
Advertisement
ಆರಂಭದಲ್ಲಿ ಮಧ್ಯಾಹ್ನ 1.03ಕ್ಕೆ ನಿಗದಿಯಾಗಿದ್ದರೂ ಮತ್ತೆ ಭಾರತೀಯ ಕಾಲಮಾನ ಮಧ್ಯಾಹ್ನ 2.08ಕ್ಕೆ ನಿಗದಿಯಾಗಿತ್ತು. ನಂತರ ಈ ಉಡವಾಣಾ ಸಮಯವನ್ನು ನಾಸಾ ಈಗ ಭಾನುವಾರಕ್ಕೆ ಮುಂದೂಡಿದೆ. ಭಾನುವಾರ ಭಾರತೀಯ ಕಾಲಮಾನ ಮಧ್ಯಾಹ್ನ 1.01(ಅಮೆರಿಕ ಕಾಲಮಾನ ಬೆಳಗ್ಗೆ 3.31) ರಾಕೆಟ್ ಉಡಾವಣೆಯಾಗಲಿದೆ.
Advertisement
This morning's launch of a @ulalaunch #DeltaIV Heavy rocket carrying the #ParkerSolarProbe spacecraft was scrubbed. The launch is planned for Sunday, Aug. 12. Details: https://t.co/0BhSpVA9oZ pic.twitter.com/QQWZv2gKo0
— NASA (@NASA) August 11, 2018
Advertisement
ಸೋಲಾರ್ ಪಾರ್ಕರ್ ನೌಕೆ ಸೂರ್ಯನ ನಾಭಿಯಿಂದ 61 ಲಕ್ಷ ಕಿ. ಮೀ ಸಮೀಪ ಸಾಗಲಿದೆ. ಸೂರ್ಯನ ಬಳಿ ತಲುಪಿದ 7 ವರ್ಷಗಳ ಅವಧಿಯಲ್ಲಿ 24 ಬಾರಿ ಈ ನೌಕೆ ಹಾದು ಹೋಗಲಿದೆ. ಒಂದು ಸೆಕೆಂಡಿಗೆ ಅಂದಾಜು 200 ಕಿ.ಮೀ ವೇಗದಲ್ಲಿ ಸಾಗುವ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಸೂರ್ಯನ ಸಮೀಪ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಹೀಗಾಗಿ ಅತಿ ವೇಗದ ಮಾನವ ನಿರ್ಮಾಣ ವಾಹನವೆಂಬ ಖ್ಯಾತಿಯನ್ನು ಸೋಲಾರ್ ಪ್ರೋಬ್ ನೌಕೆ ಪಡೆದಿದೆ. ಈ ವಿಶೇಷ ಅಧ್ಯಯನಕ್ಕೆ ಅಮೆರಿಕ ಸರ್ಕಾರ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.
Advertisement
This morning’s launch of @NASASun’s #ParkerSolarProbe was scrubbed. Launch teams will attempt to launch on Sunday morning. Get real-time updates: https://t.co/9uczz8fdI8 pic.twitter.com/6GyCioopfa
— NASA (@NASA) August 11, 2018
ಸೂರ್ಯನ ಶಾಖದಿಂದ ನೌಕೆ ಸುಟ್ಟು ಹೋಗದೇ ಇರಲು ಕಾರ್ಬನ್ ಹೀಟ್ ಶೀಲ್ಡ್ ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1,370 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದರೆ, ಒಳಭಾಗದಲ್ಲಿ ಕೇವಲ 30 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ವಿದ್ಯುತ್‍ಗಾಗಿ ಸೌರ ಪ್ಯಾನೆಲ್‍ಗಳನ್ನು ಬಳಸಲಾಗಿದೆ.
60 ವರ್ಷದ ಹಿಂದೆ ಅಮೆರಿಕದ ಭೌತಶಾಸ್ತ್ರ ವಿಜ್ಞಾನಿ ಯೂಜಿನ್ ಪಾರ್ಕರ್ ಸೌರ ಮಾರುತದ ಇರುವುಕೆಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.
Something mysterious is going on at the ????. In defiance of all logic, @NASASun’s atmosphere gets much hotter the farther it stretches from the Sun’s surface. Learn how we’ll use Parker #SolarProbe to get to the bottom of this solar mystery: https://t.co/f7VyWPqV32 pic.twitter.com/n2cSPW6CTg
— NASA (@NASA) August 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews