ಬೆಂಗಳೂರು: ನಗರದ ಪಾರ್ಕ್‌ಗಳಲ್ಲಿ ವಾಕ್ ಮಾಡಿದರೆ ಕೊರೊನಾ ಸೊಂಕು ಹರಡುತ್ತಾ? ಯಾಕ್ರಿ ಪಾರ್ಕ್‌ಗಳನ್ನು ಬಂದ್ ಮಾಡುತ್ತೀರಿ ಎಂದು ಸಿಎಂ ಯಡಿಯೂರಪ್ಪ ಅವರ ಆದೇಶದ ವಿರುದ್ಧ ಲಾಲ್ ಬಾಗ್‍ನಲ್ಲಿ ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪಾರ್ಕ್‌ಗಳಲ್ಲಿ ಜನ ಸಂದಣಿ ಇರುತ್ತೆ. ಹೀಗಾಗಿ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಪಾರ್ಕ್‌ಗಳನ್ನು ಬಂದ್ ಮಾಡಿ ಎಂದು ಸಿಎಂ ಆದೇಶ ಮಾಡಿದ್ದಾರೆ. ಆದರೆ ಸಿಎಂ ಆದೇಶಕ್ಕೆ ಕಿಮ್ಮತ್ತು ನೀಡದ ಲಾಲಾ ಬಾಗ್ ತೋಟಗಾರಿಕೆ ಆಡಳಿತ ಮಂಡಳಿ, ಪಾರ್ಕ್ ಅನ್ನು ಶುರು ಮಾಡಿದೆ. ಹೀಗಾಗಿ ನಿತ್ಯ ಸಾವಿರಾರು ವಾಕರ್ಸ್ ಮಾಸ್ಕ್ ಧರಿಸದೇ ಲಾಲ್ ಬಾಗ್ ಉದ್ಯಾನವನಕ್ಕೆ ಬರುತ್ತಿದ್ದಾರೆ.
Advertisement
Advertisement
ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾರ್ಕ್ ನಲ್ಲಿ ಸೂಚನಾ ಫಲಕಗಳನ್ನು ಕೂಡ ಹಾಕಿಲ್ಲ. ಇನ್ನೂ ಸಿಎಂ ಆದೇಶದ ಕ್ರಮವನ್ನು ಕೆಲ ವಾಯು ವಿಹಾರಿಗಳು ಸ್ವಾಗತಿಸಿದರೆ, ಇನ್ನೂ ಕೆಲವರು ಪಾರ್ಕ್ ಗಳಲ್ಲಿ 30-40 ವರ್ಷದಿಂದ ವಾಕ್ ಮಾಡುತ್ತಿದ್ದೇವೆ. ಏಕಾಏಕಿ ಬಂದ್ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ. ಎರಡ್ಮೂರು ಗಂಟೆಯಾದರೂ ಪಾರ್ಕ್ ಓಪನ್ ಇದ್ದರೆ ವಾಕರ್ಸ್‍ಗೆ ಅನುಕೂಲವಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟರು.