ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ (India) ಖ್ಯಾತ ವೇಟ್ ಲೀಫ್ಟರ್ ಮೀರಾಬಾಯಿ ಚಾನು (Mirabai Chanu) ಅವರಿಗೆ ಕಂಚಿನ ಪದಕ ಜಸ್ಟ್ ಮಿಸ್ ಆಗಿದೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 199 ಕೆಜಿ (88+111) ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದಿದರು.
ಸ್ನ್ಯಾಚ್‌ನ ಮೊದಲ ಯತ್ನದಲ್ಲಿ 85 ಕೆಜಿಯನ್ನು ಸುಲಭವಾಗಿ ಎತ್ತಿದ ಅವರು ಎರಡನೇ ಪ್ರಯತ್ನದಲ್ಲಿ 88 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಮೂರನೇ ಪ್ರಯತ್ನದಲ್ಲಿ 88 ಕೆ.ಜಿಗಳ ಬೆಸ್ಟ್ ಲಿಫ್ಟ್ ಮೂಲಕ ಕಂಚಿನ ಪದಕದ ಸ್ಥಾನದಲ್ಲಿದ್ದರು. ಇದನ್ನೂ ಓದಿ: ತಲೆಗೂದಲು ಕಟ್, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್?
Mirabai Chanu nails a 111kg clean & jerk! ????️♀️????
Catch her LIVE NOW in the Women’s 49kg Final only on #Sports18 & stream for FREE on #JioCinema! ????
Watch: https://t.co/zpTEWDpZyS#OlympicsOnJioCinema #OlympicsOnSports18 #JioCinemaSports #Cheer4Bharat #Weightlifting pic.twitter.com/Ggmk7AgzG5
— JioCinema (@JioCinema) August 7, 2024
ಕ್ಲೀನ್ ಆಂಡ್ ಜರ್ಕ್‌ನಲ್ಲಿ ಮೊದಲ ಯತ್ನದಲ್ಲಿ 111 ಕೆಜಿ ಎತ್ತಲು ಮೀರಾಬಾಯ ಮುಂದಾಗಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತುವಲ್ಲಿ ಸಫಲರಾದರು. ಆದರೆ ಪ್ರತಿಸ್ಪರ್ಧಿಗಳು ಹೆಚ್ಚಿನ ಭಾರ ಎತ್ತಿದ ಪರಿಣಾಮ ಮೀರಾಬಾಯಿ ಚಾನು ನಾಲ್ಕನೇ ಸ್ಥಾನ ಪಡೆದರು. ಅಂತಿಮವಾಗಿ ಕ್ಲೀನ್ ಮತ್ತು ಜರ್ಕ್ ನಲ್ಲಿ 111 ಹಾಗೂ ಸ್ನ್ಯಾಷ್ ನಲ್ಲಿ 88 ಕೆಜಿ ಸೇರಿಸಿ ಒಟ್ಟು 199 ಕೆ.ಜಿ ಲಿಫ್ಟ್ ಮಾಡಿದರು.
ಚೀನಾದ ವೇಟ್ ಲಿಫ್ಟರ್ ಜಿಹುಯಿ ಅವರು 206 ಕೆಜಿ ಎತ್ತಿ ನೂತನ ಒಲಿಂಪಿಕ್ಸ್ ದಾಖಲೆಯನ್ನು ಬರೆದರು. ಇವರು ಸ್ನ್ಯಾಷ್ ಒಟ್ಟು 89 ಎತ್ತಿದ್ದರು. ಅಲ್ಲದೆ ಇವರು ಕ್ಲೀನ್ ಆಂಡ್ ಜರ್ಕ್‌ನಲ್ಲಿ 117 ಕೆ.ಜಿ ಭಾರವನ್ನು ಎತ್ತಿದರು. ರೊಮೇನಿಯಾದ ವ್ಯಾಲಂಟಿನಾ 205 ಕೆಜಿ ಎತ್ತಿದರೆ ಥಾಯ್ಲೆಂಡಿನ ಸುರೋದ್ಚನಾ 200 ಕೆಜಿ ಎತ್ತಿ ಮೂರನೇ ಸ್ಥಾನ ಪಡೆದರು.