– ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಕಾರ್ಯಕ್ರಮ
– ಬೋಟ್‌ನಲ್ಲಿ 6 ಕಿ.ಮೀ ಪಥಸಂಚಲನ
ಪ್ಯಾರಿಸ್: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ (Olympics Games) ಅದ್ಧೂರಿಯಾಗಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಆರಂಭಗೊಂಡಿದೆ. ಸೆನ್ ನದಿಯ (River Seine) ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು.
Advertisement
Those smiles carry the dreams and aspirations for glory 🥇of a billion Indians 🫡🇮🇳
The Indian contingent has arrived officially at the #OpeningCeremony of #Paris2024! 😍#OlympicsOnJioCinema #OlympicsOnSports18 #JioCinemaSports #Cheer4Bharat pic.twitter.com/madpvuv9zA
— JioCinema (@JioCinema) July 26, 2024
Advertisement
ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಟ್ ಮೂಲಕ ಸ್ಪರ್ಧಿಗಳ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಮೊದಲಿಗೆ ಗ್ರೀಸ್ ತಂಡ ಆಗಮಿಸಿತು. ಬಳಿಕ ಫ್ರೆಂಚ್ ಅಕ್ಷರಮಾಲೆಯ ಪ್ರಕಾರ ದೇಶದ ಸ್ಪರ್ಧಿಗಳು ಆಗಮಿಸಿದರು.
Advertisement
Advertisement
Those smiles carry the dreams and aspirations for glory 🥇of a billion Indians 🫡🇮🇳
The Indian contingent has arrived officially at the #OpeningCeremony of #Paris2024! 😍#OlympicsOnJioCinema #OlympicsOnSports18 #JioCinemaSports #Cheer4Bharat pic.twitter.com/madpvuv9zA
— JioCinema (@JioCinema) July 26, 2024
ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಬೋಟ್‌ನಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ತುಂತುರು ಮಳೆ ಬಂದರೂ ಸ್ಪರ್ಧಿಗಳು ಉತ್ಸಾಹದಿಂದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಸೀನ್ ನದಿಯ ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನ ಬಳಿ ಆರಂಭಗೊಂಡ ಪಥ ಸಂಚಲನ 6 ಕಿ.ಮೀ ದೂರದಲ್ಲಿರುವ ಐಫಲ್ ಟವರ್ ಬಳಿ ಮುಕ್ತಾಯಗೊಂಡಿತು.
There could be no better sporting icons to ignite the legendary Olympic torch than them! 🥹🔥
Zidane & Nadal kick-start the #OlympicGamesParis2024 in style! 🤯🙌#OlympicsOnJioCinema #OlympicsOnSports18 #JioCinemaSports #OpeningCeremony pic.twitter.com/09RwRTDA6K
— JioCinema (@JioCinema) July 26, 2024
ಭಾರತ (India) 14ನೇ ತಂಡವಾಗಿ ಆಗಮಿಸಿತು. ಭಾರತದ ಬೋಟ್‌ನಲ್ಲಿ ಇಂಡೋನೇಷ್ಯಾ ಹಾಗೂ ಇರಾನ್ ತಂಡದ ಸ್ಪರ್ಧಿಗಳು ಇದ್ದರು. ಅತಿಥ್ಯ ವಹಿಸಿರುವ ಫ್ರಾನ್ಸ್ (France) ಕೊನೆಯ ತಂಡವಾಗಿ ಆಗಮಿಸಿದರೆ 2028ರ ಒಲಿಂಪಿಕ್ಸ್‌ಗೆ ಆತಿಥ್ಯ ನೀಡಲಿರುವ ಅಮೆರಿಕ (USA) ಕೊನೆಯಿಂದ ಎರಡನೇ ತಂಡವಾಗಿ ಪ್ರವೇಶಿಸಿತು. ಬೋಟ್ ಮೂಲಕ ಆಗಮಿಸಿದ ಎಲ್ಲಾ ತಂಡಗಳಿಗೆ ಕಾರಂಜಿ ಮೂಲಕ ವಾಟರ್ ಸೆಲ್ಯೂಟ್ ನೀಡಲಾಯಿತು.
Who else but Lady Gaga to light up #Paris2024! 🎤✨#OlympicsOnJioCinema #OlympicsOnSports18 #JioCinemaSports #OpeningCeremony pic.twitter.com/YM5SMUbuue
— JioCinema (@JioCinema) July 26, 2024
ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ ಒಟ್ಟು 78 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಎರಡು ಒಲಿಂಪಿಕ್ಸ್ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು (PV Sindhu) ಮತ್ತು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಅವರು ಭಾರತದ ಧ್ವಜಧಾರಿಗಳಾಗಿ ಪಥಸಂಚಲನವನ್ನು ಮುನ್ನಡೆಸಿದರು.
ಈ ಕಾರ್ಯಕ್ರಮದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕ್ರಾಂತಿಕಾರಿ ಬೆಳವಣಿಗೆಗಳು, ಮಿಲಿಟರಿ ಕ್ಷೇತ್ರದಲ್ಲಿ ಸಾಧನೆಯನ್ನು ತೋರಿಸಲಾಯಿತು. ಫ್ರೆಂಚ್ ಸಿನಿಮಾದ 10 ದಿಗ್ಗಜ ನಾಯಕಿಯರ ಪ್ರತಿಮೆಗಳನ್ನು ಪ್ರದರ್ಶಿಸಿ ಗೌರವಿಸಲಾಯಿತು. ಪ್ಯಾರಿಸ್ ‘ಫ್ಯಾಷನ್ ನಗರಿ’ ಎಂದೇ ಕರೆಸಿಕೊಳ್ಳುವ ಕಾರಣ, ಫ್ಯಾಷನ್ ಶೋ ಸಹ ಆಯೋಜಿಸಲಾಗಿತ್ತು.
ವಿಶ್ವ ಪ್ರಸಿದ್ಧ ಗಾಯಕಿ, ಅಮೆರಿಕದ ಲೇಡಿ ಗಾಗಾ (Lady Gaga) ಮೊದಲಿಗೆ ತಮ್ಮ ಅಮೋಘ ಕ್ಯಾಬೆ ನೃತ್ಯದ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಕೋವಿಡ್ ನಂತರದಲ್ಲಿ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಕೂಟ ಆಗಸ್ಟ್ 11 ರವರೆಗೆ ನಡೆಯಲಿದ್ದು 206 ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.