– 100 ಗ್ರಾಂ ಹೆಚ್ಚಳವಾಗಿದ್ದಕ್ಕೆ ಅನರ್ಹ
– 24 ಪುಟಗಳ ವಿಸ್ತೃತ ಆದೇಶದಲ್ಲಿ ಹಲವು ವಿಷಯಗಳ ಉಲ್ಲೇಖ
ಪ್ಯಾರಿಸ್: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು. ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳವಾಗಿದ್ದಕ್ಕೆ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರನ್ನು ಫೈನಲ್ ಪಂದ್ಯದಿಂದ ಅನರ್ಹ ಮಾಡಲಾಗಿದೆ. ಅನರ್ಹ ಮಾಡಿದ ನಿರ್ಧಾರ ಸರಿಯಾಗಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ಹೇಳಿದೆ.
ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ಆಗಸ್ಟ್ 14 ರಂದು ವಜಾ ಮಾಡಿತ್ತು. ಈಗ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲು ಕಾರಣ ಏನು ಎನ್ನುವುದನ್ನು 24 ಪುಟಗಳ ವಿಸ್ತೃತ ಆದೇಶದಲ್ಲಿ ತಿಳಿಸಿದೆ.
Advertisement
Advertisement
ಆದೇಶದಲ್ಲಿ ಏನಿದೆ?
ಫೋಗಟ್ ಅವರು ತಾನು ಯಾವ ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕು ಎಂಬುದನ್ನುದಲ್ಲಿ ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ನಿಯಮಗಳ ಬಗ್ಗೆ ಪರಿಚಿತರಾಗಿರುವ ಅನುಭವಿ ಕುಸ್ತಿಪಟುವಾಗಿದ್ದು ತೂಕದ ಮಿತಿಗಳನ್ನು ಅರ್ಥಮಾಡಿಕೊಂಡಿದ್ದಾರೆ.
Advertisement
ಫೋಗಟ್ ಅವರ ಅಸಮರ್ಥತೆ ಅವರ ತೂಕ ನಿರ್ವಹಣೆಯ ತಂತ್ರದಿಂದ ಉದ್ಭವಿಸಿದೆಯೇ ಹೊರತು ಯಾವುದೇ ಬಾಹ್ಯ ಅಂಶಗಳು ಅಥವಾ ಹಸ್ತಕ್ಷೇಪದಿಂದಲ್ಲ. ಆದ್ದರಿಂದ ಫೋಗಟ್ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್ ಫೋಗಟ್‌ಗೆ ಕೊಟ್ಟ ಅಣ್ಣ
Advertisement
ತೂಕದ ನಿಯಮ ಎಲ್ಲಾ ಕ್ರೀಡಾಪಟುಗಳಿಗೆ ಒಂದೇ ಆಗಿದ್ದು ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ತೂಕ ಪರೀಕ್ಷೆಯನ್ನು ನಡೆಸುವುದು ನಿಯಮ. ಇದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ನಿಗದಿತ ತೂಕ 50 ಕೆಜಿ 150 ಗ್ರಾಂ. ಹೆಚ್ಚಾಗಿತ್ತು.
ನಿಯಮದ ಪ್ರಕಾರ ವಿನೇಶ್ ಫೋಗತ್ ತೂಕ 50 ಕೆಜಿ ಒಳಗಿರಬೇಕಿತ್ತು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳ ಇತ್ತು. ತೂಕ ಹೆಚ್ಚಳವಾಗಿರುವ ಕುರಿತು ಯಾವುದೇ ತಕರಾರು ಇಲ್ಲ. ಆದರೆ ಇಲ್ಲೇ ನಿಯಮ ಉಲ್ಲಂಘನೆಯಾಗಿದೆ.
ತೂಕದ ಮಿತಿಯನ್ನು ಕಾಪಾಡುವುದು ಕ್ರೀಡಾಪಟು ಜವಾಬ್ದಾರಿಯಾಗಿದೆ. ಕ್ರೀಡಾಪಟು ಫೈನಲ್ ಸುತ್ತು ಆಡಿದ ಬಳಿಕ ಸಲ್ಲಿಸಿರುವ ಮನವಿ ಇದಲ್ಲ. ಈ ಕಾರಣದಿಂದ ಕ್ರೀಡಾಪಟು ಫೈನಲ್ ಸುತ್ತಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ಪದಕ ಹಂಚುವಿಕೆ ಮನವಿ ಅಪ್ರಸ್ತುತ. ಈ ಕುರಿತು ಅಂತಾರಾಷ್ಟ್ರೀಯ ಸಮಿತಿ ಪ್ರಕಟಿಸಿದ ನಿರ್ಧಾರ ಸರಿಯಾಗಿದೆ. ತೂಕದ ಅವಶ್ಯಕತೆಗಳನ್ನು ಪೂರೈಸುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ. ಇದನ್ನೂ ಓದಿ: ನನ್ನ ಅಳಿಯನನ್ನು ಗಲ್ಲಿಗೆ ಹಾಕಿ, ಬೇಕಾದದ್ದು ಮಾಡಿ – ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಆರೋಪಿಯ ಅತ್ತೆಯ ಆಕ್ರೋಶ
ಭಾರತದ ಒಲಿಂಪಿಕ್ಸ್ ಸಂಸ್ಥೆ (IOA) ವಿನೇಶ್ ಫೋಗಟ್ ಮುಟ್ಟಾಗಿದ್ದರು. ಇದು ಸಾಮಾನ್ಯ ಜೈವಿಕ ಪ್ರಕ್ರಿಯೆಯಾಗಿರುವ ಕಾರಣ ದ್ರವವನ್ನು ಹಿಡಿದಿಟ್ಟುಕೊಳ್ಳುವುದರಿಂದ ತೂಕ ಹೆಚ್ಚಾಗಿದೆ ಎಂದು ವಾದಿಸಿತ್ತು. ವಿನೇಶ್ ಫೋಗಟ್ ಸ್ವತಃ ಈ ವಿಷಯವನ್ನು ಪ್ರಸ್ತಾಪಿಸದಿದ್ದರೂ ಐಒಎ ಪ್ರಸ್ತಾಪಿಸಿತ್ತು. ಹೀಗಿದ್ದರೂ ನ್ಯಾಯಾಲಯ ಋತುಚಕ್ರದ ಪರಿಣಾಮಗಳಿಗೆ ಸಂಬಂಧಿಸಿದ ಪುರಾವೆಗಳು ಫೋಗಟ್ ಅವರು ಮೊದಲ ಆಡುವಾಗ ಇದ್ದ ತೂಕದಲ್ಲಿ ಯಾವುದೇ ವ್ಯತ್ಯಾಸ ತೋರಿಸಿರಲಿಲ್ಲ. ಋತುಚಕ್ರ ಸಾಮಾನ್ಯ ಜೈವಿಕ ಪ್ರಕ್ರಿಯೆಗಳಾಗಿದ್ದು, ಇದರಲ್ಲಿ ಆಹಾರ, ಪಾನೀಯ ಸೇವಿಸುವುದು ಒಳಗೊಂಡಿರುತ್ತದೆ. ಅನುಭವಿ ಕ್ರೀಡಾಪಟುಗಳು ಸಹಜವಾಗಿ ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಬೇಕು. ತೂಕದ ಮಾಪಕಗಳು ದೋಷಯುಕ್ತವಾಗಿವೆ ಎಂದು IOA ಹೇಳಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಆರೋಪಗಳನ್ನು ತಳ್ಳಿಹಾಕಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.
ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್ ಫೋಗಟ್ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.