– ಪದಕಕ್ಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ
ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಪುರುಷರ ಹಾಕಿಯಲ್ಲಿ (Hockey) ಗ್ರೇಟ್ ಬ್ರಿಟನ್ ಮಣಿಸಿ ಭಾರತ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
Advertisement
ಸ್ಟೇಡ್ ಯ್ವೆಸ್-ಡು-ಮನೋಯಿರ್‌ನಲ್ಲಿ ಶೂಟ್-ಔಟ್ ಮೂಲಕ ಗ್ರೇಟ್ ಬ್ರಿಟನ್ ಅನ್ನು ಭಾರತ ಸೋಲುಣಿಸಿದೆ. ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕಕ್ಕೆ ಭಾರತ ಒಂದು ಗೆಲುವಿನ ಅಂತರದಲ್ಲಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಭಾರತ ತಂಡ ಎದುರಿಸಲಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ
Advertisement
Advertisement
ಪಂದ್ಯದ 17 ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ತನ್ನ ಏಳನೇ ಗೋಲು ಗಳಿಸಿದರು. ಆ ಮೂಲಕ ಭಾರತ ಮುನ್ನಡೆ ಸಾಧಿಸಿತು. ಹರ್ಮನ್‌ಪ್ರೀತ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಇದಾದ ಐದು ನಿಮಿಷದಲ್ಲೇ ಲೀ ಮಾರ್ಟನ್ ಗ್ರೇಟ್ ಬ್ರಿಟನ್‌ಗೆ ಸಮಬಲ ಸಾಧಿಸಿದರು.
Advertisement
ಪೂರ್ಣಾವಧಿಯ ನಂತರ ಪಂದ್ಯ 1-1 ರಲ್ಲಿ ಕೊನೆಗೊಂಡರೆ, ಭಾರತವು ಶೂಟ್-ಔಟ್ ಅನ್ನು 4-2 ರಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತು. ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್ – ಬ್ರ್ಯಾಂಡ್ ಮೌಲ್ಯ 6 ಪಟ್ಟು ಹೆಚ್ಚಳ