Paris Olympics 2024: ಹಾಕಿಯಲ್ಲಿ 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮಣಿಸಿದ ಭಾರತ

Public TV
1 Min Read
India Beat Australia in Mens Hockey Paris Olympics 2024

ಪ್ಯಾರಿಸ್‌: ಶುಕ್ರವಾರ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ (Paris Olympics 2024) ಪುರುಷರ ಹಾಕಿ ಪೂಲ್‌ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಭಾರತ ತಂಡವು ಆಘಾತ ನೀಡಿದೆ. 52 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ (India) ಹಾಕಿ (Hockey) ತಂಡವು ಐತಿಹಾಸಿಕ ಸಾಧನೆ ಮಾಡಿದೆ.

1972ರ ಒಲಿಂಪಿಕ್ಸ್ ನಂತರ ಭಾರತವು ಹಾಕಿಯಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು ಸೋಲಿಸಿದ್ದು ಇದೇ ಮೊದಲು. ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ರಜತ ಪದಕ ಜಯಿಸಿತ್ತು. ಇದನ್ನೂ ಓದಿ: Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್

ಭಾರತ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ (2) ಗೋಲು ಗಳಿಸಿದರು. ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಆಸ್ಟ್ರೇಲಿಯಾ ಪರ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ (10 ಅಂಕಗಳು, 5 ಪಂದ್ಯಗಳು) ಪೂಲ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಪೂಲ್‌ನಲ್ಲಿ ಬೆಲ್ಜಿಯಂ ಮುನ್ನಡೆ ಸಾಧಿಸಿದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಜಯದೊಂದಿಗೆ ಓಟ ಆರಂಭಿಸಿತು. ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾ ಆಯಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ಗೆಲುವು ದಾಖಲಿಸಿದೆ. ಇದನ್ನೂ ಓದಿ: ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

Share This Article