ಪ್ಯಾರಿಸ್: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paris 2024 Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. ಕ್ರೀಡಾಕೂಟ ಆರಂಭವಾದ 2ನೇ ದಿನವೇ ಭಾರತ ಒಂದೇ ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದು ಬೀಗಿದೆ.
GOLD🥇 For INDIA 🇮🇳#AvaniLekhara wins gold medal in the Women’s 10m air Rifle SH1 event with a score of 249.7 🙌#Paris2024 #Cheer4Bharat #Paralympics2024@IndiaSports @ParalympicIndia @PCI_IN_Official @AvaniLekhara pic.twitter.com/lLpTp5jLlg
— MP MyGov (@MP_MyGov) August 30, 2024
Advertisement
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಹೆಚ್1 (10m Air Rifle Standing SH1) ವಿಭಾಗದ ಫೈನಲ್‌ನಲ್ಲಿ ಶೂಟರ್ ಅವನಿ ಲೆಖರಾ (Avani Lekhara) ಚಿನ್ನದ ಪದಕ ಗೆದ್ದು ಬೀಗಿದರೆ, ಮೋನಾ ಅಗರ್ವಾಲ್ (Mona Agarwal) ಕಂಚಿನ ಪದಕಕ್ಕೆ ಗುರಿಯಿಟ್ಟರು. ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವನಿ ಇದೀಗ ಮತ್ತೊಂದು ಚಿನ್ನದ ಪದಕದೊಂದಿಗೆ ದಾಖಲೆ ಬರೆದಿದ್ದಾರೆ.
Advertisement
Advertisement
ಅವನಿ 249.7 ಅಂಕ ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಮೋನಾ ಅಗರ್ವಾಲ್ 228.7 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
Advertisement
ಇನ್ನೂ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ 3ನೇ ಗುಂಪಿನ ಎ ಪಂದ್ಯದಲ್ಲಿ ಷಟ್ಲರ್ ನಿತೇಶ್ ಕುಮಾರ್, ನೇರ ಸುತ್ತಿನಲ್ಲಿ ಚೀನಾದ ಯಾಂಗ್ ಜಿಯಾನ್ಯುವಾನ್ ಅವರನ್ನ ಸೋಲಿಸಿ ಸೆಮಿಸ್‌ಗೆ ಲಗ್ಗೆಯಿಟ್ಟರು.