ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚೆಡ್ಡಾ ವಿವಾಹ ಸೆಪ್ಟಂಬರ್ 24ರಂದು ಉದಯಪುರದಲ್ಲಿ ನಡೆಯುತ್ತಿದೆ. ನಾಳೆಯಿಂದ ಮದುವೆ ಮುನ್ನ ಕಾರ್ಯಕ್ರಮಗಳು ಉದಯಪುರದಲ್ಲಿ ನಡೆಯಲಿದ್ದು, ಇಂದು ಪರಿಣಿತಿ ಮತ್ತು ರಾಘವ್ ಉದಯಪುರ ಏರ್ ಪೋರ್ಟಿಗೆ ಬಂದಿಳಿದರು. ನವ ಜೋಡಿಯನ್ನು ಸ್ವಾಗತಿಸುವುದಕ್ಕಾಗಿ ಉದಯಪುರ ಏರ್ ಪೋರ್ಟ್ ಅನ್ನೇ ಸಿಂಗಾರಗೊಳಿಸಲಾಗಿತ್ತು.
Advertisement
ರಾಜಸ್ತಾನದ ಸಂಪ್ರದಾಯದಂತೆ ಪರಿಣಿತಿ ಮತ್ತು ರಾಘವ್ ಜೋಡಿಯನ್ನು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಲಾಯಿತು. ಕೆಂಪುಹಾಸು ಸೇರಿದಂತೆ ವಿಶೇಷ ಸಂಗೀತ ಮತ್ತು ಸ್ವಾಗತಕ್ಕಾಗಿ ಸ್ಥಳೀಯ ಕಲಾವಿದರು ಆಗಮಿಸಿದ್ದರು. ದುಬಾರಿ ಕಾರಿನಲ್ಲಿ ನವ ಜೋಡಿ ಪಂಚತಾರಾ ಹೋಟೆಲ್ ಪ್ರಯಾಣಿಸಿತು. ಅಲ್ಲಲ್ಲಿ ಸ್ವಾಗತ ಫಲಕಗಳನ್ನು ಕೂಡ ಅಳವಡಿಸಲಾಗಿತ್ತು.
Advertisement
Advertisement
ಪರಿಣಿತಿ ಚೋಪ್ರಾ (Parineeti Chopra) ಮದುವೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಈಗಾಗಲೇ ಮುಂಬೈನ ಪರಿಣಿತಿ ಮನೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಮದುವೆ ಆಗಲಿರುವ ಉದಯಪುರದ ಲೀಲಾ ಪ್ಯಾಲೇಸ್ ಕೂಡ ಸಜ್ಜಾಗಿದೆ. ಸೆ.23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ವಿವಾಹ ನಡೆಯಲಿದೆ.
Advertisement
ಪರಿಣಿತಿ ಈಗಾಗಲೇ ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರೀತಿಸಿದ ಗೆಳೆಯ, ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಇಬ್ಬರೂ ಸೇರಿ ಗಣ್ಯರಿಗೆ ಮದುವೆ (Marriage) ಆಮಂತ್ರಣ ಪತ್ರಿಕೆ ಹಂಚುವಲ್ಲಿ ನಿರತರಾಗಿದ್ದಾರೆ. ಒಟ್ಟು ಇನ್ನೂರು ಗಣ್ಯರಿಗೆ ಅಂದು ಆಹ್ವಾನ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಗಣ್ಯರು ಹೊರ ದೇಶದವರು ಆಗಿದ್ದಾರೆ ಎನ್ನುವುದು ವಿಶೇಷ.
ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್ನಲ್ಲಿ ಆರತಕ್ಷತೆ ನಡೆಯಲಿದೆ.
Web Stories