ಬಾಲಿವುಡ್ ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ (Parineeti-Raghav Wedding) ಜೋಡಿ ಮದುವೆ ರಾಜಸ್ಥಾನದ ಲೀಲಾ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸಿಖ್ ಪದ್ಧತಿಯಂತೆ ಪರಿಣಿತಿ-ರಾಘವ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಇಂದು (ಭಾನುವಾರ) ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸಂಜೆ 6:30ಕ್ಕೆ ಶುಭ ಮುಹೂರ್ತದಲ್ಲಿ ಹೊಸ ಬಾಳಿಗೆ ಈ ಜೋಡಿ ಕಾಲಿಟ್ಟಿದೆ. ಸ್ಟಾರ್ ಮದುವೆಗೆಂದು ಲೀಲಾ ಪ್ಯಾಲೇಸ್ನ್ನು ಭವ್ಯವಾಗಿ ಅಲಂಕರಿಲಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Advertisement
Advertisement
ಪರಿಣಿತಿ ಮದುವೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವರು ಭಾಗಿಯಾಗಿರೋದು ಹೈಲೆಟ್. ಮೇ ತಿಂಗಳಿನಲ್ಲಿ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು.
Advertisement
ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ನವಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಆದರೆ ಪರಿಣಿತಿ ಚೋಪ್ರಾ ಮದುವೆಯ ಫೋಟೋ ಇನ್ನೂ ರಿವೀಲ್ ಆಗಿಲ್ಲ. ಇದನ್ನೂ ಓದಿ: ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರಾ? ನಟಿ ಸ್ಪಷ್ಟನೆ
Web Stories