ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadda) ಇತ್ತೀಚಿಗಷ್ಟೇ ಉಂಗುರ ಬದಲಿಸುವ ಮೂಲಕ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ರಾಜಸ್ಥಾನದಲ್ಲಿ ಪರಿಣಿತಿ- ರಾಘವ್ ಮದುವೆ ನಡೆಯಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ
ಬಿಟೌನ್ ‘ಲವ್ ಬರ್ಡ್ಸ್’ ರಾಘವ್ – ಪರಿಣಿತಿ ಚೋಪ್ರಾ (Parineeti Chopra) ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮೇ 13ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಈ ಜೋಡಿಯ ಮದುವೆ ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಉದಯ್‌ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ (Rajasthan) ಮದುವೆ ಸ್ಥಳ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಅದ್ದೂರಿ ಮದುವೆಯಾಗಲು ಈ ಜೋಡಿ ನಿರ್ಧಾರ ಮಾಡಿದ್ದಾರೆ.
ಪರಿಣಿತಿ- ರಾಘವ್ ಮದುವೆಯಲ್ಲಿ ರಾಜಕೀಯ- ಬಾಲಿವುಡ್ ಗಣ್ಯರ ದಂಡೇ ಇರಲಿದೆ. ಮದುವೆಗೆ ಈಗಿಂದಲೇ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.