ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ದಿವಂಗತ ಅಂಬರೀಶ್ ಅವರ ಜೊತೆ ತಮ್ಮ ಮಗ ನಟಿಸಿದ್ದ ಚಿತ್ರವೊಂದರ ನೆನಪನ್ನು ನೆನೆದು ಟ್ವೀಟ್ ಮಾಡಿದ್ದಾರೆ.
ಪರಿಮಳಾ ಜಗ್ಗೇಶ್ ಅವರು, `1989ರ ಡಿಸೆಂಬರ್ 5 ರಂದು ಅಂಬರೀಶ್ ಅವರ ಜೊತೆ ನನ್ನ ಹಿರಿಯ ಮಗ ಗುರು ನಟಿಸಿದ್ದರು. ‘ಮಲ್ಲಿಗೆ ಹೂವೆ’ ಚಿತ್ರದಲ್ಲಿ ಅಂಬರೀಶ್ ಅವರ ಮಗನ ಪಾತ್ರದಲ್ಲಿ ಗುರು ನಟಿಸಿದ್ದ. ಆ ಚಿತ್ರದ ಎರಡು ದಿನಗಳ ಶೂಟಿಂಗ್ ನೆನಪುಗಳನ್ನು ಎಂದಿಗೂ ಮರೆಯಾಲಾಗುವುದಿಲ್ಲ’ ಎಂದು ತಮ್ಮ ಮಗನ ಸಣ್ಣ ವಯಸ್ಸಿನ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
Advertisement
#Ambareesh avare jotheyalli my elder son Guru debuted in the movie field in 1989 Dec 5th. A pic from that movie. He acted as his son in the movie #MalligeHoove
Unforgettable memories…those 2 days of shooting.
Can't believe Ambi avaru is no longer with us alwa…@Jaggesh2 pic.twitter.com/cYIKTGEcp4
— Parimala Jaggesh (@27parims) November 27, 2018
Advertisement
ಈ ಟ್ವೀಟ್ಗೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿ, `ಅಂಬಿ ಸಾರ್ ಜೊತೆ ನಟಿಸಿದಾಗ 2 ವರ್ಷದ ಗುರುರಾಜ್ ಜಗ್ಗೇಶ್ ಹೀಗಿದ್ದ. ಇದು ಅಂಬಿ ಸರ್ ತೆಗೆದ ಫೋಟೋ’ ಎಂದು ರೀ- ಟ್ವೀಟ್ ಮಾಡಿಕೊಂಡಿದ್ದಾರೆ.
Advertisement
ಸೋಮವಾರ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಜಗ್ಗೇಶ್, ಅಂಬರೀಶ್ ಅವರ ಜೊತೆ ಮೊದಲು ನಾನು ನಟಿಸಿಲ್ಲ. ನನ್ನ ದೊಡ್ಡ ಮಗ ಗುರುರಾಜ್ ನಟಿಸಿದ್ದನು. ಮಲ್ಲಿಗೆ ಹೂವೆ ಎಂಬ ಚಿತ್ರಕ್ಕೆ ಒಂದು ಮಗು ಬೇಕು ಅಂತ ಕೇಳಿದಾಗ ನಿರ್ದೇಶಕರು ಜಗ್ಗೇಶ್ ಮಗನೇ ಇದ್ದಾನೆ ಅಂತ ಹೇಳಿ ಕರೆದುಕೊಂಡು ಬರಲು ಹೇಳಿದ್ದರು. ಹೀಗಾಗಿ 2 ವರ್ಷದ ಗುರುರಾಜ್ ಅವರ ಜೊತೆ ಅಭಿನಯಿಸಿದ್ದನು. ಆ ಸಂದರ್ಭದಲ್ಲೇ ನಮ್ಮಿಬ್ಬರ ಗೆಳೆತನ ಆರಂಭವಾಗಿತ್ತು ಎಂದು ತಮ್ಮ ಸ್ನೇಹ ಆರಂಭವಾದ ದಿನಗಳನ್ನು ಮೆಲಕು ಹಾಕಿಕೊಂಡಿದ್ದರು.
Advertisement
ಅಂಬಿ ಸಾರ್ ಜೊತೆ ನಟಿಸಿದಾಗ 2ವರ್ಷದ #gururajjaggesh ಹೀಗಿದ್ದ..
ಅಂಬಿ ಸಾರ್ ತೆಗೆದ #stills https://t.co/yebtwh0D1u
— ನವರಸನಾಯಕ ಜಗ್ಗೇಶ್ (@Jaggesh2) November 28, 2018
ನನ್ನಂತೆ ಇನ್ನೊಬ್ಬ ಕಲಾವಿದನೂ ಚೆನ್ನಾಗಿರಬೇಕು ಅನ್ನೋದು ದೊಡ್ಡ ಗುಣ ಅವರಲ್ಲಿತ್ತು. ಇತ್ತೀಚೆಗೆ ಕಲಾವಿದರ ಸಂಘದಲ್ಲೇ ಅವರನ್ನು ಭೇಟಿ ಮಾಡಿದ್ದೆ. ಸುಮಾರು 4 ತಾಸು ಮಾತುಕತೆ ನಡೆಸಿದ್ದೆವು. ತುಂಬಾ ಜನರಿಗೆ ಅನ್ನ ಹಾಕಿ, ಆನಂದಪಡುವ ಜೀವ ಅದು. ನಾನು ಹೋಗ್ತೀನಿ ಅಂದ್ರೂ ಬಿಡದೆ ಕೂರಿಸಿ ಊಟ ಹಾಕಿ ತಿನ್ನಿಸಿ, ಭಾವನಾತ್ಮಕವಾಗಿ ಮಾತನಾಡಿಸುವ ಒಳ್ಳೆಯ ಗುಣ ಅವರಲ್ಲಿತ್ತು ಅಂತಾ ಜಗ್ಗೇಶ್ ಹೇಳಿದ್ದರು.
https://www.youtube.com/watch?v=oQw70XJk8IQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv