ಕಾರವಾರ: ಪರೇಶ್ ಮೇಸ್ತಾ (Paresh Mesta) ಹತ್ಯೆ ಗಲಭೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2017 ರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಶಿರಸಿಯಲ್ಲಿ ನಡೆದಿದ್ದ ಗಲಭೆಯಲ್ಲಿ 112 ಜನರ ಮೇಲಿದ್ದ ಮೂರು ಪ್ರಕರಣ ಹಿಂಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಅಂಗಳಕ್ಕೆ ರೂಪಾ-ರೋಹಿಣಿ ಕಚ್ಚಾಟ; ಸಿಎಸ್‌ಗೆ ಇಬ್ಬರು ಮಹಿಳಾ ಅಧಿಕಾರಿಗಳಿಂದ ಪರಸ್ಪರ ದೂರು
Advertisement
Advertisement
ಈ ಹಿಂದೆ ಶಿರಸಿಯಲ್ಲಿ ದಾಖಲಾಗಿದ್ದ 26 ಪ್ರಕರಣವನ್ನು ಸರ್ಕಾರ ಹಿಂಪಡೆದಿತ್ತು. ಆದರೆ 112 ಜನರ ಮೇಲೆ ಮೂರು ಪ್ರಕರಣಗಳು ಬಾಕಿ ಉಳಿದಿದ್ದವು.
Advertisement
Advertisement
ಶಿರಸಿಯಲ್ಲಿ ನಡೆದ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri), ಬಿಜೆಪಿ (BJP) ಕಾರ್ಯಕರ್ತರು, ಭಜರಂಗದಳ ಕಾರ್ಯಕರ್ತರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಇಂದು 112 ಜನರ ಪ್ರಕರಣ ಹಿಂಪಡೆದು ಆದೇಶ ಮಾಡಲಾಗಿದ್ದು, ಹಲವರು ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ: ಬೂತ್ ಮಟ್ಟದ ಕಾರ್ಯಕರ್ತರಿಗೆ ಜೆ.ಪಿ ನಡ್ಡಾ ಬೂಸ್ಟ್; ಬಿಜೆಪಿ ಗೆಲುವಿಗೆ ಪಣ ತೊಡುವಂತೆ ಕರೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k