LatestLeading NewsMain PostUttara Kannada

ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತಾ (Paresh Mesta) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತಂಡವು ಹೊನ್ನಾವರದ ನ್ಯಾಯಾಲಯಕ್ಕೆ ಸಲ್ಲಿಸಿರುವ ʼಬಿʼ ರಿಪೋರ್ಟ್‌ನ್ನು (B Report) ಆಕ್ಷೇಪಿಸಿ ಮೇಸ್ತಾ ತಂದೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡವು ಅಕ್ಟೋಬರ್ 6 ರಂದು ಹೊನ್ನಾವರದ ನ್ಯಾಯಾಲಯಕ್ಕೆ ʼಬಿ‌ʼ ರಿಪೋರ್ಟ್ ಸಲ್ಲಿಕೆ ಮಾಡಿತು. ಇದನ್ನು ಆಕ್ಷೇಪಿಸಿ ಪರೇಶ್ ಮೇಸ್ತಾ ತಂದೆ ಕಮಾಲಕ ಮೇಸ್ತಾ ಅವರು ಹೊನ್ನಾವರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಬಡ ಪ್ರತಿಭಾವಂತನ ಬೆನ್ನಿಗೆ ನಿಂತ ಶಾಸಕ ಪರಣ್ಣ ಮುನವಳ್ಳಿ

ಕಳೆದ ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದ ಸಿಬಿಐ ತನಿಖಾ ತಂಡ, ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ. ಅದು ಸಹಜ ಸಾವು. ಆರೋಪಿತರನ್ನು ದೋಷಮುಕ್ತ ಮಾಡಬಹುದೆಂದು ನ್ಯಾಯಾಲಯಕ್ಕೆ ವರದಿ ನೀಡಿತ್ತು.

ಬಿ ರಿಪೋರ್ಟ್‌ ಕುರಿತು ಆಕ್ಷೇಪಣೆ ಮಾಡಿದ್ದ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ, ತನ್ನ ಮಗನ ಸಾವು ಸಹಜವಾಗಿದ್ದಲ್ಲ. ಅವನನ್ನು ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಯಾಗಬೇಕು ಎಂದು ನ್ಯಾಯಾಲಯದ ಮುಂದೆ ಹಾಜರಾಗಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ

Live Tv

Leave a Reply

Your email address will not be published. Required fields are marked *

Back to top button