ಹಾವೇರಿ: ರಷ್ಯಾ (Russia) ಮತ್ತು ಉಕ್ರೇನ್ (Ukraine) ಯುದ್ಧದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಕನ್ನಡಿಗ ನವೀನ್ (Naveen) ಬಲಿಯಾಗಿದ್ದ. ಈ ಘಟನೆಯಿಂದ ನಮ್ಮ ದೇಶ ಹಾಗೂ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಈಗ ನವೀನ್ ಕಂಡ ಒಂದು ಕನಸನ್ನ ತಂದೆ-ತಾಯಿ ನನಸು ಮಾಡಿದ್ದಾರೆ. ಆತನ ಹೆಸರಿನಲ್ಲಿ ನೂತನ ಮನೆ ನಿರ್ಮಿಸಿದ್ದು, ಮಗನ ಹೆಸರನ್ನ ನಾಮಕರಣ ಮಾಡಿದ್ದಾರೆ.
Advertisement
2022ರ ಮಾರ್ಚ್ 1 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿದ್ದ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ನವೀನ್ ನಿಧನಕ್ಕೆ ಪ್ರಧಾನಿ ಮೋದಿ (Narendra Modi), ರಾಜ್ಯಪಾಲರು, ಸಿಎಂ ಬೊಮ್ಮಾಯಿ (Basavaraj Bommai), ಬಿಎಸ್‍ವೈ (B S Yediyurappa), ವಿಪಕ್ಷ ನಾಯಕರು ಸೇರಿದಂತೆ ಎಲ್ಲರೂ ಸಾಂತ್ವನ ಹೇಳಿದರು. ನವೀನ್ ಅಗಲಿ 1 ವರ್ಷ ಆಗ್ತಿದ್ದು, ಮಗನ ಕನಸನ್ನು ಇದೀಗ ಹೆತ್ತವರು ಸಾಕಾರಗೊಳಿಸಿದ್ದಾರೆ. ತಾನು ವೈದ್ಯನಾದ ಬಳಿಕ ಮನೆ ಕಟ್ಟಬೇಕು. ಈಗ ಇರುವ ಮನೆಯಲ್ಲಿ ಕ್ಲಿನಿಕ್ ನಡೆಸಬೇಕೆಂಬ ನವೀನ್ ಆಸೆಯನ್ನು ತಂದೆ-ತಾಯಿ ಪೂರೈಸಿದ್ದಾರೆ. ನೂತನ ಮನೆ (New Home) ಯನ್ನು ಕಟ್ಟಿಸಿದ್ದು, ಅದಕ್ಕೆ ಮಗನ ಹೆಸರನ್ನೇ ಇಟ್ಟಿದ್ದಾರೆ.
Advertisement
Advertisement
ಸುಮಾರು 27 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನ ಕಟ್ಟಿಸಿದ್ದಾರೆ. ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ ಅವರು ನವೀನ್ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivasa) ಎಂದು ನಾಮಕರಣ ಮಾಡಿದ್ದು, ಮನೆಯ ಮುಂಭಾಗದಲ್ಲಿಯೇ ನವೀನ್ ಭಾವಚಿತ್ರವನ್ನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇಂದು ಗೃಹಪ್ರವೇಶ ಮಾಡಲಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್
Advertisement
ನವೀನ್ ತಂದೆ-ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನವೀನ್ ಬಲಿ ಪಡೆದುಕೊಂಡಿತ್ತು. ಆ ಕುಟುಂಬದ ಕನಸು ಕಮರುವಂತೆ ಮಾಡಿತ್ತು. ಈಗ ಮಗನ ಕನಸು ನನಸು ಮಾಡಿ ಮಗನ ನೆರಳಿನಲ್ಲಿ ತಂದೆ-ತಾಯಿ ಜೀವನ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k