ಮಂಡ್ಯ: ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.
ನಮಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಪರವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅದೇಷ್ಟೋ ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿದ್ದಾರೆ. ಅಂತಹದರಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದು, ಇತ್ತ ತಂದೆ ತಾಯಿಗಳ ಲಾಲನೆ ಪಾಲನೆ ಇಲ್ಲದೇ ಮಗು ಒದ್ದಾಡುತ್ತಿದೆ.
Advertisement
Advertisement
ಇಂದು ಬೆಳಗ್ಗೆ 6:30ರ ವೇಳೆಗೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ಪೋಷಕರು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಚರ್ಚ್‍ನ ಸಿಬ್ಬಂದಿ ಆ ಕಂದಮ್ಮನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.
Advertisement
Advertisement
ಮಗುವನ್ನು ವಶಕ್ಕೆ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಆರೋಗ್ಯ ಚೆನ್ನಾಗಿ ಇಲ್ಲ ಎಂದು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪಾಪ ಈ ಎಳೆಯ ಕಂದಮ್ಮನಿಗೆ ಅಪಸ್ಮಾರ ಇದ್ದು, ಒದ್ದಾಡುತ್ತಿದೆ. ಅಲ್ಲದೇ ಈ ಮಗುವಿಗೆ ಬುದ್ಧಿಮಾಂದ್ಯತೆಯೂ ಸಹ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಮಿಮ್ಸ್ ವೈದ್ಯರು ಮಗುವಿಗೆ ಚಿಕಿತ್ಸೆ ನೀಡುತ್ತಾ ಇದ್ದಾರೆ.