ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

Public TV
1 Min Read
Hubballi Love Marriage

– ಯುವತಿ ತಂಟೆಗೆ ಬಾರದಂತೆ ಪತಿಗೆ ಧಮ್ಕಿ

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಬಲವಂತವಾಗಿ ಪೋಷಕರು ಎತ್ತೊಯ್ದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

ಹುಬ್ಬಳ್ಳಿಯ ಬೈರಿಕೊಪ್ಪ (Barikoppa) ಗ್ರಾಮದ ನಿರಂಜನ್ ಹಾಗೂ ಸುಷ್ಮಾರ ಪರಸ್ಪರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಕಳೆದ ಎಂಟು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಈ ಜೋಡಿ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ಬಂದಿದ್ದರು. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು. ಇದೀಗ ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದರು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್‌ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಎತ್ತೊಯ್ದಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್‌ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: Bengaluru | ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ

ಮದುವೆಯಾಗಿ ನಾವು ಒಂದು ತಿಂಗಳು ಜೊತೆಗೆ ಇದ್ದೆವು. ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ನನ್ನ ಪತ್ನಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಅಲ್ಲದೆ ನನಗೂ ಬೆದರಿಕೆ ಹಾಕಿದ್ದಾರೆ. ನಮ್ಮಿಬ್ಬರಿಗೂ ರಕ್ಷಣೆ ನೀಡಬೇಕೆಂದು ನಿರಂಜನ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

Share This Article