ಕಾರವಾರ: ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ತಂದೆ-ತಾಯಿ ದಿನವಿಡೀ ದುಡಿಯುತ್ತಾರೆ. ಅದರ ಜೊತೆಗೆನೇ ಮಕ್ಕಳ ಶಾಲಾ-ಕಾಲೇಜು ವಿದ್ಯಾಭ್ಯಾಸದ ಬಗ್ಗೆಯೂ ವಿಚಾರ ಮಾಡುತ್ತಾರೆ. ಆದರೆ ಈ ಶಾಲೆಯಲ್ಲಿ ನೀಡುವ ಅಡ್ಮಿಷನ್ ಫಾರ್ಮ್‌ಗೆ ಪಾಲಕರು ರಾತ್ರಿಯಿಡೀ ನಿದ್ದೆಗೆಟ್ಟು ಶಾಲಾ ಆವರಣದಲ್ಲಿ ಕಾದು ಕಳಿತು ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೆಂಟ್ ಅಂಥೋನಿ ಎಲ್‍ಕೆಜಿ ಸ್ಕೂಲ್, ಶಿರಸಿಯಲ್ಲಿಯೇ ಮೊದಲು ಪ್ರಾರಂಭವಾದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿದೆ. ಇಲ್ಲಿ ಪ್ರತಿ ವರ್ಷವೂ ಅಡ್ಮಿಷನ್‍ಗೆ ಸಾಕಷ್ಟು ಬೇಡಿಕೆ ಇದೆ. ವರ್ಷದಲ್ಲೊಮ್ಮೆ ನೀಡುವ ಅಡ್ಮಿಷನ್ ಫಾರ್ಮ್ ಪಡೆಯೋಕೆ 500ಕ್ಕೂ ಹೆಚ್ಚು ಪಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಾರೆ.
ಸೇಂಟ್ ಅಂಥೋನಿ ಶಾಲೆಯಲ್ಲಿ 160 ರಿಂದ 200 ಮಕ್ಕಳನ್ನು ಎಲ್‍ಕೆಜಿಗೆ ಅಡ್ಮಿಷನ್ ಮಾಡಿಸಿಕೊಳ್ತಾರೆ. ಆ 200 ಮಕ್ಕಳಲ್ಲಿ ತಮ್ಮ ಮಕ್ಕಳೂ ಒಬ್ಬರಾಗಬೇಕು ಎನ್ನುವ ಆಸೆಯಲ್ಲಿ ಪೋಷಕರು ಕಾಯುತ್ತಿರುತ್ತಾರೆ. ಬೆಳಗ್ಗೆ 10 ಗಂಟೆಗೆ ನೀಡುವ ಅಡ್ಮಿಷನ್ ಫಾರ್ಮ್‌ಗೆ ರಾತ್ರಿಯಿಂದಲೇ ಕ್ರಮ ಸಂಖ್ಯೆ ಬರೆದು ಚೀಟಿ ಇಟ್ಟು ರಾತ್ರಿಯಿಡೀ ಕಾದು, ಶಾಲಾ ಆವರಣದಲ್ಲೇ ಕೂತಿರೋದು ನಿಜಕ್ಕೂ ಆಶ್ಚರ್ಯ ಎನಿಸಿದೆ.
ಪ್ರತಿ ವರ್ಷ ಯಾರು ಮೊದಲು ಹೆಸರು ನೋಂದಾಯಿಸುತ್ತಾರೋ ಆ ಮಕ್ಕಳಿಗೆ ಇಲ್ಲಿ ಸೀಟು ಸಿಗುತ್ತದೆ. ಅಡ್ಮಿಷನ್ ಬೇರೆಯವರ ವರ್ಚಸ್ಸಿನ ಮೇಲೆ ನಡೆದು ಗಲಾಟೆ ಆಗಬಾರದೆಂದು ಎನ್ನುವ ಕಾರಣಕ್ಕೆ ಪೋಷಕರೇ ಈ ನಿಯಮವನ್ನು ಹಾಕಿಕೊಂಡಿದ್ದಾರೆ. ವರ್ಷ ಪೂರ್ತಿ ಮಕ್ಕಳ ಭವಿಷ್ಯಕ್ಕೆ ಏನೆಲ್ಲ ಮಾಡುತ್ತೇವೆ. ಆದ್ರೆ ಒಂದು ರಾತ್ರಿ ನಿದ್ರೆ ಬಿಟ್ಟು ಕಷ್ಟ ಆದ್ರುನೂ ಪರವಾಗಿಲ್ಲ. ಇದೇ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಅಡ್ಮಿಷನ್ ಸಿಗಲಿ ಎಂದು ಕಾದು ಕುಳಿತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.
ನಮ್ಮ ಮಕ್ಕಳ ಭವಿಷ್ಯ ಮುಖ್ಯ ಎನ್ನುವ ಇಲ್ಲಿಯ ಪೋಷಕರು ರಾತ್ರಿಯಿಂದ ಬೆಳಗ್ಗೆವರೆಗೂ ಕಾದು ಕುಳಿತು ತಮ್ಮ ಸಂಖ್ಯೆಗೆ ತಕ್ಕಂತೆ ಫಾರ್ಮ್ ಪಡೆಯಲು ಮುಗಿಬಿದ್ದಿದ್ದಾರೆ. ಇಂಗ್ಲೀಷ್ ವ್ಯಾಮೋಹ ಮತ್ತು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಪೋಷಕರು ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಹಾಗಂತ ಬೇರೆಲ್ಲೂ ಇಂಗ್ಲಿಷ್ ಮೀಡಿಯಂ ಶಾಲೆ ಇಲ್ಲ ಎಂದೇನೂ ಅಲ್ಲ. ಇದ್ದರೂ ಕೂಡ ಶಿರಸಿಯಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಈ ಶಾಲೆ ಬ್ರಾಂಡ್ ಆಗಿದ್ದು ಈ ಕಾರಣದಿಂದ ಪೋಷಕರು ಮುಗಿಬಿದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv