15,000 ಕ್ಕಾಗಿ 1 ತಿಂಗಳ ಮಗುವನ್ನು ಮಾರಾಟ ಮಾಡಿದ ಪೋಷಕರು!

Public TV
2 Min Read
GLB CHILD COLLAGE

ಕಲಬುರಗಿ: ಹದಿನೈದು ಸಾವಿರಕ್ಕೆ ಒಂದು ತಿಂಗಳು ಹೆಣ್ಣು ಕೂಸನ್ನು ಮಾರಾಟ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಚಿಂಚೋಳಿ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಘಟನೆ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದುನಾಯಕ ತಾಂಡಾದ ನಿವಾಸಿ ರಾಮಚಂದ್ರ ಅನಸೂಯಾ ದಂಪತಿ ತಮ್ಮ ನಾಲ್ಕನೇ ಹೆಣ್ಣು ಮಗುವನ್ನು ಮಾರಾಟ ಮಾಡಿದ್ರು. ಶಾದಿಪೂರ ಗ್ರಾಮದ ಆಶಾ ಕಾರ್ಯಕರ್ತೆಯಾಗಿರುವ ಸುವರ್ಣಾ ಜಮಾದಾರ ಎನ್ನುವ ಮಧ್ಯವರ್ತಿ ಮೂಲಕ ಹೈದರಾಬಾದ್ ಮೂಲದ ಪಾಲ್ ದಂಪತಿಗೆ 15 ಸಾವಿರ ರೂಪಾಯಿ ತಗೆದುಕೊಂಡು ಇದೇ ತಿಂಗಳು 8ರಂದು ಮಾರಾಟ ಮಾಡಿದ್ದರು.

GLB CHILD 7

ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿವೆ. ಇನ್ನೊಂದೆಡೆ ಹೈದರಾಬಾದ್‍ನಲ್ಲಿ ಪಾಲ್ ದಂಪತಿಗೆ ಗಂಡು ಮಗುವಾಗಿ ನಂತರ ಅದು ಸಾವನ್ನಪ್ಪಿತ್ತು. ನಂತರ ವೈದ್ಯರು ಮಕ್ಕಳಾಗೋದಿಲ್ಲ ಎಂದು ಹೇಳಿದ್ದರು. ಹೀಗಾಗಿ ಪಾಲ್ ದಂಪತಿ ಆಶಾ ಕಾರ್ಯಕರ್ತೆ ಸುವರ್ಣಾ ಜಮಾದಾರ್ ಗೆ ಮಗು ಕೊಡಿಸಲು ಕೇಳಿದ್ದಾರೆ. ಅನಸೂಯಾ ಇದೇ ಜನವರಿಯಲ್ಲಿ ಹೆಣ್ಣು ಮಗುವನ್ನು ಹೆತ್ತಿದ್ದರಿಂದ ಮಗು ಮಾರಾಟ ಮಾಡಿದರೆ 15 ಸಾವಿರ ಸಿಗುತ್ತೆ ಎಂದು ಸುವರ್ಣಾ ಹೇಳಿದ್ದಾಳೆ.

GLB CHILD 8

ಬಡತನದ ಹಿನ್ನೆಲೆಯಲ್ಲಿ ದಂಪತಿ ಮಗುವನ್ನು ಹಣಕ್ಕಾಗಿ ನೀಡಲು ಒಪ್ಪಿಕೊಂಡು ಫೆಬ್ರವರಿ 8ರಂದು ಪಾಲ್ ದಂಪತಿಗೆ ನೀಡಿದ್ದಾರೆ. ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಪೊಲೀಸರು ಮಗುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಚಿಂಚೋಳಿ ಠಾಣೆಯಲ್ಲಿ ಹೆತ್ತವರು, ಮಧ್ಯವರ್ತಿ ಮತ್ತು ಮಗು ಪಡೆದವರಿದ್ದು, ಐವರ ಮೇಲೆ ಪ್ರಕರಣ ದಾಖಲಾಗಿದೆ.

ಈ ಹಿಂದೆ ಕೂಡಾ ಈ ಭಾಗದಲ್ಲಿ ಮಕ್ಕಳ ಮಾರಾಟ ಪ್ರಕರಣಗಳು ನಡೆದಿದ್ದವು. 2001, 2012 ರಲ್ಲಿ ಕೂಡಾ ಮಕ್ಕಳ ಮಾರಾಟ ಪ್ರಕರಣಗಳು ನಡೆದಿದ್ದವು.

GLB CHILD 2

ಮಗು ಮಾರಾಟ ಮಾಡಲು ಕಾರಣವೇನು?: ಚಿಂಚೋಳಿ ತಾಲೂಕಿನ ಸುತ್ತಮುತ್ತ ಸಾಕಷ್ಟು ಲಂಬಾಣಿ ತಾಂಡಾಗಳಿವೆ. ಬಡತನದಲ್ಲೇ ಜೀವನ ನಡೆಸುತ್ತಿರುವ ಅನೇಕರ ಬದುಕು ನಡೆಸುವುದೇ ದುಸ್ತರವೆನ್ನುವಷ್ಟು ಬಡತನವಿದೆ. ಇನ್ನೊಂದೆಡೆ ಗಂಡು ಮಗುವಿನ ಹಂಬಲವು ಇದೆ. ಸಾಕಷ್ಟು ದಂಪತಿ ತಮಗೆ ಗಂಡು ಮಗು ಬೇಕು ಎಂದು ಅನೇಕ ಮಕ್ಕಳನ್ನು ಹೆರುತ್ತಾರೆ. ಕೊನೆಗೆ ಅದು ಗಂಡಾಗದಿದ್ದರೆ ಮಾರಾಟ ಮಾಡುತ್ತಿದ್ದಾರೆ.

ಈ ಹಿಂದೆ ಮಗು ಮಾರಾಟ ಪ್ರಕರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಗ ಚಿಂಚೋಳಿ ಬಾಗದ ಲಂಬಾಣಿ ತಾಂಡಾಗಳಲ್ಲಿ ವಾಸಿಸುವವರಿಗೆ ಸರ್ಕಾರ ಕೆಲ ಸೌಲಭ್ಯಗಳನ್ನು ಕೂಡಾ ಕಲ್ಪಿಸಿತ್ತು. ಆದರೆ ಅದು ಪ್ರಯೋಜನವಾಗಿಲ್ಲ. ಹೀಗಾಗಿ ಆಗಾಗ ಮಗು ಮಾರಾಟ ಪ್ರಕರಣಗಳು ನಡೆಯುತ್ತಲೇ ಇವೆ.

GLB CHILD

GLB CHILD 5

GLB CHILD 6

GLB CHILD 9
           ಮಗುವನ್ನು ಹಣ ನೀಡಿ ಖರೀದಿಸಿದ ಹೈದರಾಬಾದ್ ನಿವಾಸಿ

Share This Article
Leave a Comment

Leave a Reply

Your email address will not be published. Required fields are marked *