ಹುಬ್ಬಳ್ಳಿ: ಯುವಕನೊಬ್ಬ ವಿದ್ಯಾರ್ಥಿನಿಯನ್ನು ಇಲ್ಲಿನ ಬಿವಿಬಿ ಕಾಲೇಜು (BVB College) ಕ್ಯಾಂಪಸ್‌ನಲ್ಲೇ ಭೀಕರವಾಗಿ ಕೊಲೆ (Student Murder) ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಇನ್ನೂ ಮಗಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಯಿ ಗೀತಾ, ನೇಹಾ (Neha) ಈಗಿನ ಹುಡುಗಿಯರ ತರಹ ಫ್ಯಾನ್ಸಿ ಇದ್ದಿಲ್ಲ. ಇನ್ನೊಬ್ಬರಿಗೆ ಕೇಡು ಬಯಸಿದವಳಲ್ಲ. ಅವಳಿಗೆ ಇಂತಹ ಮೋಸ ಆಯಿತು. ಅವಳನ್ನು ರಾಣಿ ತರಹ ನೋಡಿಕೊಳ್ಳುತ್ತಿದ್ದೆವು. ಪ್ರತಿದಿನ ಕಾರಿನಲ್ಲೇ ಕಾಲೇಜಿಗೆ ಕಳುಹಿಸಿ, ಕಾರಿನಲ್ಲೇ ಕರೆದುಕೊಂಡು ಬರುತ್ತಿದ್ದೆವು. ಇವತ್ತೂ ಸಹ ಕಾಲೇಜು ಮಗಿದ ತಕ್ಷಣ ನಾನೇ ಅವಳನ್ನ ಕರೆದುಕೊಂಡು ಬರಲು ಹೋಗಿದ್ದೆ. ಅಷ್ಟರಲ್ಲೇ ಅವಳಿಗೆ ಇಂತಹ ಸ್ಥಿತಿ ಬಂದೊದಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್
Advertisement
Advertisement
ಮಗಳ ಸಾವಿನ ಬಗ್ಗೆ ಮಾತನಾಡಿರುವ ತಂದೆ ನಿರಂಜನ ಹಿರೇಮಠ, ನೇಹಾ ಎಂಸಿಎ ಓದುತ್ತಿದ್ದಳು. ಬಿವಿಬಿ ಹೆಚ್‌ಒಡಿ ಆಫೀಸ್ ಮುಂದೆಯೇ ತಲ್ವಾರ್‌ನಿಂದ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಫೈಜಲ್ ಮತ್ತು ಮಗಳು ನೇಹಾ ಬಿಸಿಎ ಸಹಪಾಠಿಗಳು, ಇಬ್ಬರಿಗೂ ಹಳೇ ಪರಿಚಯ. ಆದರೆ ನೇಹಾ ಈಗ ಎಂಸಿಎ ಮಾಡುತ್ತಿದ್ದಳು, ಬಿವಿಬಿಯಲ್ಲಿ ಸುರಕ್ಷತೆ ಬಗ್ಗೆ ಸಾಕಷ್ಟು ಅಸಮಾಧಾನ ಮೂಡುತ್ತಿದೆ. ಅಪರಿಚಿತರು ಹೀಗೆ ತಲ್ವಾರ್ ಹಿಡಿದು ಬಂದು ಕೊಲೆ ಮಾಡ್ತಾರೆ ಅಂದ್ರೆ ಹೇಗೆ? ಕಾಲೇಜು ಒಳಗೆ ಮಾರಕಾಸ್ತ್ರ ತರಲು ಬಿಟ್ಟವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ಕೊಲೆ ಮಾಡಿದ್ದಾನೆ. ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆಯಾದ ವಿದ್ಯಾರ್ಥಿನಿ. ಅದೇ ಕಾಲೇಜಿನ ವಿದ್ಯಾರ್ಥಿ ಫೈಜಲ್ 9 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಪ್ರಥಮ ವರ್ಷದ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ನೇಹಾಗೆ ಕ್ಯಾಂಪಸ್‌ನಲ್ಲೇ 9 ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಪ್ರಾಣ ಬಿಟ್ಟಿದ್ದಾಳೆ. ಇದನ್ನೂ ಓದಿ: PublicTV Explainer: ಬೆಂಗಳೂರಿನ ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ; ಏನಿದು ಮಾರಕ ಕಾಯಿಲೆ – ಮನುಷ್ಯರಿಗೂ ಹರಡುತ್ತಾ?
ಪ್ರೀತಿ ತಿರಸ್ಕರಿಸಿದ್ದಕ್ಕೆ ಕೊಲೆ ಶಂಕೆ:
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫೈಜಲ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ. ಆದರೆ ನೇಹಾ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ಫೈಜಲ್‌ನನ್ನು ಅಲ್ಲಿದ್ದ ವ್ಯಕ್ತಿಗಳು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಈಗ ಫೈಜಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳೇ ಇಲ್ಲ: ಸಚಿವ ನಾಗೇಂದ್ರ