ಮಕ್ಕಳನ್ನು ಬದುಕಿಸಲು ಉಪ್ಪಿನ ರಾಶಿಯೊಳಗೆ ಮೃತದೇಹ ಇಟ್ಟ ಪೋಷಕರು

Public TV
1 Min Read
Haveri

ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದ ವಿಡಿಯೋ ನೋಡಿ ಮೃತ ಮಕ್ಕಳನ್ನು ಬದುಕಿಸಲು ಪೋಷಕರು (Parents) ಹೆಣಗಾಟ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಮೃತ ಮಕ್ಕಳನ್ನು ಹೇಮಂತ್ (12) ಹಾಗೂ ನಾಗರಾಜ್ (11) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನೆಲಮಂಗಲದಲ್ಲಿ ಧಗಧಗನೇ ಹೊತ್ತಿ ಉರಿದ ಕಾರು – ಓರ್ವ ಸಜೀವ ದಹನ

Haveri Childrens death

ಮೃತ ಮಕ್ಕಳ ಪೋಷಕರು ಉಪ್ಪಿನ ರಾಶಿಯಲ್ಲಿ (Pile of Salt) ಅವರ ಮೃತದೇಹ (Dead Body) ಮುಚ್ಚಿಟ್ಟು ಬದುಕಿಸಲು ಹೋರಾಟ ನಡೆಸಿದ್ದರು. ಸತತ 6 ಗಂಟೆಗಳ ಕಾಲ ಉಪ್ಪಿನ ಗುಡ್ಡೆಯಲ್ಲಿ ಮೃತದೇಹ ಇಟ್ಟು ಬದುಕಿಸುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಊಟದ ಮೆನುವಿನಲ್ಲಿ ಮಟನ್ ಕರ್ರಿ ಇಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!

ಮೃತದೇಹ ಪತ್ತೆಯಾಗುತ್ತಿದ್ದಂತೆ ಮನೆಗೆ ತಂದು ಉಪ್ಪುರಾಶಿಯನ್ನು ಹಾಕಿ ಪೋಷಕರು ಬದುಕಿಸಲು ಹೆಣಗಾಟ ಮಾಡಿದ್ದಾರೆ. ಇತ್ತೀಚಿಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುಳ್ಳು ವೈರಲ್ ವಿಡಿಯೋ ನೋಡಿ ಪೋಷಕರು ಹೀಗೆ ಮಾಡಿದ್ದರು. ಕಾಗಿನೆಲೆಯ ಪೊಲೀಸರು ಪೋಷಕರ ಮನವೊಲಿಸಿದ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಗಿನಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಇದನ್ನೂ ಓದಿ: ಗ್ಯಾಸ್ ಗೀಸರ್‌ಗೆ ಮತ್ತೊಂದು ಬಲಿ – ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ ಸಾವು

Share This Article