ಭೋಪಾಲ್: ಸಂಪ್ರದಾಯದ ಪ್ರಕಾರ ಕನ್ಯಾದಾನ ಮಾಡುವುದು ಪುಣ್ಯದ ಕೆಲಸ ಎನ್ನಲಾಗುತ್ತದೆ. ಹೀಗಾಗಿ ಮಧ್ಯ ಪ್ರದೇಶದಲ್ಲಿ ಮಗಳ ಮದುವೆ ಮಾಡಿಸುವ ಹಿಂದಿನ ದಿನ ತಂದೆ-ತಾಯಿ ಮದುವೆಯಾಗಿ, ಮಾರನೆ ದಿನ ಮಗಳಿಗೆ ಕನ್ಯಾದಾನ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಇದೇನಪ್ಪ ಮಗಳ ಮದುವೆ ಮಾಡುವ ಹಿಂದಿನ ದಿನ ತಂದೆ-ತಾಯಿ ಮದುವೆನಾ? ಇದು ಯಾವ ಪದ್ಧತಿ ಎಂದು ಅಚ್ಚರಿ ಅನಿಸಬಹುದು. ಆದರೆ ವಾಸ್ತವವಾಗಿ ಇದು ಪದ್ಧತಿ ಅಥವಾ ಸಂಪ್ರದಾಯವಲ್ಲ, ಬದಲಿಗೆ 25 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಜೋಡಿ ಮಗಳ ಕನ್ಯಾದಾನ ಮಾಡಲು ಮದುವೆಯಾಗಿದ್ದಾರೆ.ಇದನ್ನೂ ಓದಿ:ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ
Advertisement
Advertisement
ಹೌದು. ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿ 55 ವರ್ಷದ ಪರಿಮಲ್ ಸಿಂಗ್ ಅವರು ಲಿವ್ ಇನ್ ನಲ್ಲಿದ್ದ 50 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಪರಿಮಲ್ ಜೋಡಿಗೆ ನಾಲ್ಕು ಮಕ್ಕಳಿದ್ದಾರೆ. ಇಷ್ಟು ವರ್ಷ ಲಿವ್ ಇನ್‍ನಲ್ಲಿದ್ದ ಜೋಡಿ ತಮ್ಮ ಮೊದಲ ಮಗಳ ಮದುವೆ ಮಾಡಿಸಲು ಮುಂದಾದಾಗ ತಂದೆ- ತಾಯಿ ಮದುವೆ ಆಗದೆ ಕನ್ಯಾದಾನ ಮಾಡಲು ಸಾಧ್ಯವಿಲ್ಲ ಎಂದು ಪಂಡಿತರು ಹೇಳಿದ್ದಾರೆ. ಹೀಗಾಗಿ ತಮ್ಮ ಮಗಳ ಕನ್ಯಾದಾನ ಬೇರೆಯವರ ಕೈಯಿಂದ ಆಗಬಾರದು ಎಂದು ಪರಿಮಲ್ ಜೋಡಿ ಮಗಳ ಮದುವೆ ಮಾಡುವ ಹಿಂದಿನ ದಿನ ತಾವೂ ಅಧಿಕೃತವಾಗಿ ಮದುವೆಯಾಗಿದ್ದಾರೆ. ಬಳಿಕ ಮಾರನೆ ದಿನ ಮಗಳ ಕನ್ಯಾದಾನ ಮಾಡಿದ್ದಾರೆ.
Advertisement
Advertisement
ಮಕ್ಕಳೇ ಮುಂದೆ ನಿಂತು ತಂದೆ-ತಾಯಿ ಮದುವೆ ಮಾಡಿಸಿದ್ದು ಈ ಮದುವೆಯ ವಿಶೇಷವಾಗಿತ್ತು. ದಿಬ್ಬಣದಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಂಡು ತಂದೆ-ತಾಯಿ ಮದುವೆಯನ್ನು ಮಾಡಿಸಿ, ಮರುದಿನ ಸಹೋದರಿಯ ಮದುವೆ ಸರಳವಾಗಿ, ಸಂಭ್ರಮದಿಂದ ಮಾಡಿಸಿದ್ದಾರೆ.