ದಾವಣಗೆರೆ: ಮನೆಯವರ ಬೆದರಿಕೆಯಿಂದ ಪ್ರೇಮಿಗಳಿಬ್ಬರು ಪೊಲೀಸ್ ರಕ್ಷಣೆ ಕೋರಿದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದ ರುಹಿನಾ ಕೌಸರ್ (23) ಹಾಗೂ ಹರಿಹರ ನಗರದ ವಿನಾಯಕ್ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮನೆಯವರೂ ಇವರ ಪ್ರೀತಿಯನ್ನು ವಿರೋಧಿಸಿದ್ದರಿಂದ ನವೆಂಬರ್ 15ರಂದು ಜೋಡಿ ಮದುವೆಯಾಗಿದ್ದಾರೆ.
Advertisement
Advertisement
ವಿವಾಹವಾಗಿರೋ ಜೋಡಿಗೆ ಇದೀಗ ಕುಟುಂಬಸ್ಥರು ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಪ್ರೇಮಿಗಳು ಎಸ್‍ಪಿ ಕಚೇರಿಯ ಮೆಟ್ಟಿಲೇರಿದ್ದಾರೆ.
Advertisement
ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರು ವಿರೋಧಿಸಿ ಬೇರೆ ಬೇರೆ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸರು ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಹಿಂದೂಪರ ಸಂಘಟನೆಗಳು ಕೂಡ ಇವರ ರಕ್ಷಣೆಗೆ ನಿಂತಿವೆ.
Advertisement