ಬಾಗಲಕೋಟೆ: ಇಷ್ಟು ದಿನ ವೀರ ಯೋಧ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರನ್ನು ಅಭಿಮಾನದಿಂದ ಗಂಡು ಮಕ್ಕಳಿಗೆ ಇಡುವುದು ಟ್ರೆಂಡ್ ಆಗಿತ್ತು. ಆದ್ರೆ ಈಗ ಹೆಣ್ಣು ಮಗುವೊಂದಕ್ಕೂ ಕೂಡ ಹೆತ್ತವರು ವೀರ ಯೋಧನ ಹೆಸರನ್ನು ನಾಮಕರಣ ಮಾಡಿದ್ದಾರೆ.
ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ಅಭಿನಂದನ್ ಅವರ ಮೀಸೆ, ಹೇರ್ ಸ್ಟೈಲ್, ಅಷ್ಟೇ ಏಕೆ ಸ್ವತಃ ಅಭಿನಂದನ್ ಅವರ ಹೆಸರೇ ಫೇಮಸ್ ಆಗಿಬಿಟ್ಟಿದೆ. ಅಲ್ಲದೆ ಇಷ್ಟು ದಿನ ಬರೀ ಗಂಡು ಮಗುವಿಗೆ ಮಾತ್ರ ಅಭಿನಂದನ್ ಅಂತ ಅಭಿಮಾನದಿಂದ ಹೆತ್ತವರು ಹೆಸರಿಡುತ್ತಿದ್ದರು. ಆದ್ರೆ ಬಾಗಲಕೋಟೆ ಜಿಲ್ಲೆಯ ಇಳಕಲ್‍ನ ನಗರ ಸಭೆ ಮಾಜಿ ಕಮೀಶನರ್ ಆಗಿದ್ದ ಅರವಿಂದ್ ಜಮಖಂಡಿ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಅಭಿನಂದನಾ’ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!
Advertisement
Advertisement
ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಗ್ರಾಮದವರಾದ ಅರವಿಂದ್ ಜಮಖಂಡಿ ಸದ್ಯ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈರಿ ರಾಷ್ಟ್ರ ಪಾಕಿಸ್ಥಾನದಿಂದ ಸುರಕ್ಷಿತವಾಗಿ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ಮೇಲಿನ ಅಭಿಮಾನದಿಂದ, ಫೆಬ್ರವರಿ 11 ರಂದು ಜನಿಸಿದ ತಮ್ಮ ಮೂರನೇ ಮಗಳಿಗೆ ಅಭಿನಂದನಾ ಎಂಬ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv