ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೋಷಕರು (Parents) ತಮ್ಮ ಮೃತ ಹೆಣ್ಣುಮಕ್ಕಳ (Daughters) ಸಮಾಧಿಗೆ ಬೀಗ ಹಾಕುವ ಮೂಲಕ ಅತ್ಯಾಚಾರದಿಂದ ರಕ್ಷಿಸುತ್ತಿರುವ ಆಘಾತಕಾರಿ ವಿಷಯವೊಂದು ಬಹಿರಂಗವಾಗಿದೆ.
ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಮಾಧಿಗಳಲ್ಲಿರುವ ಮೃತ ಹೆಣ್ಣು ಮಕ್ಕಳ ದೇಹವನ್ನು ಹೊರತೆಗೆದು ಅತ್ಯಾಚಾರ ಎಸಗುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮೃತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ.
ಈ ಹಿಂದೆ ಅನೇಕ ಮೃತ ಮಹಿಳೆಯರ ದೇಹಗಳನ್ನು ಹಲವಾರು ಸಂದರ್ಭಗಳಲ್ಲಿ ಹೊರತೆಗೆಯಲಾಗಿದೆ. ಅಷ್ಟೇ ಅಲ್ಲದೇ ಅತ್ಯಾಚಾರವಾಗಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿತ್ತು. ಅದಕ್ಕೆ ಪುಷ್ಠಿ ಎನ್ನುವಂತೆ 2011ರಲ್ಲಿ ಕರಾಚಿಯ ಉತ್ತರ ನಾಜಿಮಾಬಾದ್‍ನ ಮುಹಮ್ಮದ್ ರಿಜ್ವಾನ್ ಎಂಬಾತ ಸ್ತ್ರೀ ಶವಗಳ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದ. ಅದಾದ ಬಳಿಕ ಆತನನ್ನು ಬಂಧಿಸಲಾಯಿತು. ಇದನ್ನೂ ಓದಿ: ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಶೇಕಡಾ 40ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: ನಾನು ಅಭಿಮನ್ಯು ಅಲ್ಲ, ಅರ್ಜುನ : ಸಿ.ಟಿ.ರವಿ