ಬೆಂಗಳೂರು: 21 ವರ್ಷದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಐದು ಜನರಿಗೆ ಜೀವನವನ್ನು ನೀಡಿದ್ದಾನೆ. ಯುವಕನ ಪೋಷಕರು ಆತನ ಮೂತ್ರಪಿಂಡ, ಯಕೃತ್ ಮತ್ತು ಕಾರ್ನಿಯಾವನ್ನು ದಾನ ಮಾಡಿದ್ದಾರೆ.
ಶ್ರೀ ಸುಜನ್ ಅಂಗಾಂಗ ದಾನ ಮಾಡಿದ ವಿದ್ಯಾರ್ಥಿ. 21 ವರ್ಷದ ಶ್ರೀ ಸುಜನ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜನವರಿ 17ರಂದು ದೊಡ್ಡಬಳ್ಳಾಪುರದ ಬಳಿ ಅಪಘಾತಕ್ಕೆ ಒಳಗಾಗಿದ್ದ. ತಕ್ಷಣ ಆತನನ್ನು ಕೊಲಂಬಿಯಾ ಏಷ್ಯಾ ದೊಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಆತನನ್ನು ಅಲ್ಲಿಂದ ನರಚಿಕಿತ್ಸೆಯ ಆರೈಕೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳಕ್ಕೆ ಕರೆತರಲಾಗಿತ್ತು.
Advertisement
Advertisement
ಅಪಘಾತದಿಂದ ಶ್ರೀ ಸುಜನ್ ಮೆದುಳಿಗೆ ತೀವ್ರ ಆಘಾತಕಾರಿ ಗಾಯವಾಗಿದೆ ಎಂದು ಸಿಟಿ ಸ್ಕ್ಯಾನ್‍ನ ಮೂಲಕ ತಿಳಿದು ಬಂದಿದೆ. ಈ ವಿಷಯ ತಿಳಿದ ನಂತರ ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ಗಾಯದ ಸ್ವರೂಪ ತೀವ್ರವಾಗಿದ್ದರಿಂದ ಯಾವುದೇ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ, ಮೆದುಳಿನ ಚಟುವಟಿಕೆ ಮತ್ತು ರೋಗಿಯ ಜೀವವನ್ನು ಕಾಪಾಡಲು ವೈದ್ಯರ ಗರಿಷ್ಠ ಪ್ರಯತ್ನ ಮುಂದುವರಿಸಿದರು. ಆತನನ್ನು ಸೂಕ್ಷ್ಮ ಘಟಕದಲ್ಲಿ ಇರಿಸಿ ಔಷಧಿ ನೀಡುವಂತೆ ಮಾಡಲಾಯಿತು. ಇದೆಲ್ಲದರ ಹೊರತಾಗಿಯೂ ಆತನ ಮೆದುಳಿನ ಗಾಯದ ಸ್ಥಿತಿ ಹದಗೆಟ್ಟಿತ್ತು ಮತ್ತು ಜನವರಿ 21ರಂದು ಆಳವಾದ ಕೋಮಾಗೆ ಜಾರಿದ್ದ.
Advertisement
Advertisement
ವಿವರವಾದ ಕ್ಲಿನಿಕಲ್ ಮತ್ತು ವಿಕಿರಣ ಪರೀಕ್ಷೆಯಿಂದ ಮೆದುಳಿಗಾದ ಗಾಯದ ಬಗ್ಗೆ ಯಾವುದೇ ಚೇತರಿಕೆಯ ಅಂಶವನ್ನು ತೋರಿಸಿರಲಿಲ್ಲ. ಇದರ ತರುವಾಯ ಅವರ ಮೆದುಳು 22ರಂದು ನಿಷ್ಕ್ರಿಯಗೊಂಡಿದೆ ಎಂದು ಘೋಷೊಸಲಾಯಿತು. ರೋಗಿಯ ತಂದೆ, ತಾಯಿ, ಸಹೋದರ ಮತ್ತು ಚಿಕ್ಕಪ್ಪ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಂಗಗಳ ದಾನವನ್ನು ಮಾಡಲು ಮುಂದಾದರು. ಅಂಗಾಂಗ ದಾನ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವ ಬಗ್ಗೆ ಇದ್ದ ಅವರ ಮನವಿ ಮತ್ತು ತಿಳುವಳಿಕೆಯನ್ನು ಆಸ್ಪತ್ರೆ ಗೌರವಿಸಿತು.
ಅಂಗಾಗಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೂ 22ರಂದು ಬೆಳಗ್ಗೆ ಕರ್ನಾಟಕದ ಕಸಿ ಪ್ರಧಿಕಾರ ಜೀವನ ಸಾರ್ಥಕತೆಯ ಮೂಲಕ ಪ್ರಾರಂಭವಾಯಿತು. ಮರುಪಡೆಯಲಾದ ಅಂಗಂಗಾಗಳಲ್ಲಿ ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಹೆಬ್ಬಾಳ ಆಸ್ಪತ್ರೆಯಲ್ಲಿದ್ದ ರೋಗಿಗೆ ನೀಡಲಾಯಿತು. ಇತರ ಮೂತ್ರಪಿಂಡ ಮತ್ತು ಯಕೃತ್ತನ್ನು ಸಕ್ರಾ ವಲ್ರ್ಡ್ ಆಸ್ಪತ್ರೆಯಲ್ಲಿ ಸೂಕ್ತರಿಗೆ ನೀಡಲು ಸ್ಥಳಾಂತರಿಸಲಾಯಿತು. ಎರಡು ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.