DistrictsKarnatakaLatestMysuru

ಅಪಘಾತದಿಂದ ಕೋಮಾ ಸೇರಿದ್ದ ಯುವತಿಯ ಅಂಗಾಂಗ ದಾನ ಮಾಡಿದ ಪೋಷಕರು

ಮೈಸೂರು: ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ .

ಹಾಸನ ಮೂಲದ ನಮನ (21) ಕೋಮಾದಲ್ಲಿರುವ ಯುವತಿ. ಅಪಘಾತದಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ನಮನ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಮನ ಬದುಕಿ ಉಳಿಯುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ದುಃಖದಲ್ಲಿದ್ದರೂ, ಪೋಷಕರು ಮಗಳ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಜೀರೋ ಟ್ರಾಫಿಕ್ ವ್ಯವಸ್ಥೆ:
ಸದ್ಯ ನಮನ ಅವರ ಕಿಡ್ನಿ ಹಾಗೂ ಶ್ವಾಸಕೋಶವನ್ನು ಜೀರೋ ಟ್ರಾಫಿಕ್‍ನಲ್ಲಿಯೇ ಮೈಸೂರಿಂದ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇದಕ್ಕೆ ಮೈಸೂರು ನಗರ ಸಂಚಾರ ಪೊಲೀಸರ ಸಹಕಾರ ನೀಡಿದರು.

One Comment

  1. ನಿಮ್ಮ ಆತ್ಮಾಕ್ಕೆ ಶಾಂತಿ ಸಿಗಲಿ

Leave a Reply

Your email address will not be published.

Back to top button