Districts
ಮಗಳು ಲವ್ ಜಿಹಾದ್ ಗೆ ಸಿಲುಕಿದ್ದಾಳೆಂದು ಪೋಷಕರ ದೂರು

ಶಿವಮೊಗ್ಗ: ಮೈಸೂರಿನಲ್ಲಿ ಪ್ರೀತಿಸಿ ಮದುವೆಯಾದ ಯುವತಿ ಲವ್ ಜಿಹಾದ್ ಗೆ ಸಿಲುಕಿದ್ದಾಳೆ ಎಂದು ಆಕೆಯ ಪೋಷಕರು ದೂರಿದ್ದಾರೆ.
ಶಿವಮೊಗ್ಗದ ಸಂಗೀತ ವಿದ್ವಾನ್ ಅರವಿಂದ್ ಹೆಗಡೆ- ಆಶಾ ದಂಪತಿಯ ಪುತ್ರಿ ಅನುಷಾ ಹೆಗಡೆ ಲವ್ ಜಿಹಾದ್ ಗೆ ಸಿಲುಕಿರುವ ಯುವತಿ. ಮೂಲತಃ ಶಿವಮೊಗ್ಗದವರಾದ ಇವರು ಹದಿಮೂರು ವರ್ಷದ ಹಿಂದೆ ಮೈಸೂರಿಗೆ ಹೋಗಿ ನೆಲೆಸಿದ್ದರು.
ಅನುಷಾ ಮೈಸೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಜಾವೀದ್ ಖಾನ್ ಎಂಬಾತನ ಜೊತೆ ಲವ್ ಆಗಿ, ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದಾರೆ. ಆದರೆ ಆತನಿಗೆ ಈ ಮುಂಚೆ ಎರಡು ಮದುವೆ ಆಗಿದ್ದು, ನಮ್ಮ ಮಗಳಿಗೆ ಮೋಸ ಮಾಡಿದ್ದಾನೆ ಎಂದು ತಂದೆ-ತಾಯಿ ದೂರುತ್ತಿದ್ದಾರೆ. ಆಕೆಯನ್ನು ಮನೆಗೆಲಸದವಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಈ ನಡುವೆ ಗಂಡನನ್ನ ಬಿಟ್ಟು ಬಂದ ಅನುಷಾಳ ಜೊತೆ ಪೋಷಕರು ಹತ್ತು ದಿನಗಳ ಹಿಂದೆ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ಆದರೆ ಮತ್ತೆ ಅನುಷಾಳನ್ನು ಜಾವೆದ್ ಬಂದು ಕರೆದುಕೊಂಡು ಹೋಗಿದ್ದಾನೆ. ಈ ಹಿನ್ನಲೆಯಲ್ಲಿ ಜಯನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪೋಷಕರು ಕಿಡ್ನ್ಯಾಪ್ ಎಂದು ದೂರು ನೀಡಿದ್ದಾರೆ. ಆದರೆ ಅನುಷಾ ಸ್ವಂತ ಇಚ್ಛೆಯಿಂದ ಹೋಗಿರುವುದಾಗಿ ತಿಳಿಸಿದ್ದಾರೆ.
