ಮಂಡ್ಯ: ಮಗಳ ಮೃತ ದೇಹವನ್ನು ನೋಡಲು ತಂದೆ-ತಾಯಿ ಜೈಲಿನಿಂದ ಬಂದಿರುವ ಮನಕರಗುವಂತಹ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶಿವಲಿಂಗು ಹಾಗೂ ತಾಯಿ ಅನುರಾಧ ಅವರ ಪುತ್ರಿ ಮಾನ್ವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ದೇಹವನ್ನು ನಿನ್ನೆ ಮಂಡ್ಯ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿತ್ತು. ಬುಧವಾರ ನ್ಯಾಯಾಲಯದ ಅನುಮತಿ ಪಡೆದು ಮಾನ್ವಿತಾ ಮೃತದೇಹವನ್ನು ನೋಡಲು ಶಿವಲಿಂಗು ಮತ್ತು ಅನುರಾಧ ಜೈಲಿನಿಂದ ಬಂದಿದ್ದಾರೆ.ಇದನ್ನೂ ಓದಿ:ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರು – ಸಹೋದ್ಯೋಗಿಗಳಿಗೆ ಸಿಎಂ ಮೆಚ್ಚುಗೆ
Advertisement
Advertisement
ಅಂತ್ಯಕ್ರಿಯೆ ನೆರವೇರಿರಲಿಲ್ಲ!
ಕೋರ್ಟ್ ಅನುಮತಿ ಪಡೆದು ಬುಧವಾರ ಜೈಲಿನಿಂದ ಪೋಷಕರು ಹೊರ ಬಂದದ್ದಾರೆ. ಕಳೆದ ಏ.16ರಿಂದ ನಗರದ ಕಲ್ಲಹಳ್ಳಿಯ ವಿವಿ ನಗರ ಬಡಾವಣೆಯ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಮಾನ್ವಿತಾ ಇದ್ದಳು. ಆದರೆ ಮಾನಸಿಕ ಖಿನ್ನತೆಗೆ ಒಳಗಗಾಗಿ ನೇಣು ಬಿಗಿದುಕೊಂಡು ಮಾನ್ವಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶಿವಲಿಂಗು ಮತ್ತು ಅನುರಾಧ ಜೈಲಿನಿಂದ ಕಾರಣ ಬಾಲಕಿಯ ಅಂತ್ಯಕ್ರಿಯೆ ನೆರವೇರಿರಲಿಲ್ಲ.ಇದನ್ನೂ ಓದಿ:ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಷಿತಾ, ಬಿಂದು
Advertisement
Advertisement
ಜೈಲಿಗೆ ಹೋಗಲು ಮಗಳೇ ಕಾರಣ!
ಏ.15ರಂದು ಮಂಡ್ಯದ ಕಲ್ಲಹಳ್ಳಿಯಲ್ಲಿ ದರ್ಶನ್ ಅಪ್ರಾಪ್ತ ಬಾಲಕನ ಹತ್ಯೆ ನಡೆಯಲಾಗಿತ್ತು. ಆ ಹತ್ಯೆ ಮಾಡಿದವರು ಶಿವಲಿಂಗು ಹಾಗೂ ಅನುರಾಧ. ಮಾನ್ವಿತಾ, ದರ್ಶನ್ ಇಬ್ಬರ ಪ್ರೀತಿಸುತ್ತಿದ್ದರು. ಈ ಪರಿಣಾಮ ಬಾಲಕಿಯ ಪೋಷಕರಿಂದಲೇ ಹತ್ಯೆ ನಡೆದಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಶಿವಲಿಂಗು, ಅನುರಾಧ ಸೇರಿದಂತೆ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ ಮಾನ್ವಿತಾ ಪೋಷಕರನ್ನು ಬಂಧಿಸಲಾಗಿತ್ತು.ಇದನ್ನೂ ಓದಿ:ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಾಟ – ಮತ್ತೆ ಶುರುವಾಯ್ತು ಉಗ್ರರ ಅಟ್ಟಹಾಸ
ಪ್ರಕರಣದಲ್ಲಿ ಮೃತ ಮಾನ್ವಿತಾ ಪ್ರಮುಖ ಸಾಕ್ಷಿಯಾಗಿದ್ದಳು. ಈ ಹಿನ್ನೆಲೆ ಕೊಲೆ ಆರೋಪದಡಿ ಈಕೆಯ ಪೋಷಕರು ಜೈಲು ಪಾಲಾಗಿದ್ದರು. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.