ಮುಂಬೈ: ಮಗಳ ಮೇಲೆ ದುಷ್ಟ ಶಕ್ತಿಯಿದೆ ಎಂದು ನಂಬಿದ ಪೋಷಕರು ನಾಗ್ಪುರದಲ್ಲಿ ತಮ್ಮ ಅಪ್ರಾಪ್ತ ಮಗಳನ್ನು ಹೊಡೆದು ಸಾಯಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ದುಷ್ಟ ಶಕ್ತಿಗಳನ್ನು ಓಡಿಸಲು ಐದು ವರ್ಷದ ಬಾಲಕಿಯ ಮೇಲೆ ಪೋಷಕರು ದುಷ್ಟ ಶಕ್ತಿ ಓಡಿಸಬೇಕು ಎಂದು ಕೆಲವು ಪ್ರಯೋಗ ಮಾಡಿದ್ದಾರೆ. ಆದರೆ ಇದನ್ನು ತಡೆದುಕೊಳ್ಳಲು ಶಕ್ತಿಯಿಲ್ಲದ ಆ ಬಾಲಕಿ ಸಾವನ್ನಪ್ಪಿದ್ದಾಳೆ. ಪೊಲೀಸರು ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ(45), ತಾಯಿ ರಂಜನಾ(42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್(32) ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಳೆಗೆ ಕೊಟ್ಟಿಗೆ ಗೋಡೆ ಕುಸಿತ – ಇಬ್ಬರು ಮಕ್ಕಳ ದುರ್ಮರಣ
Advertisement
Advertisement
ಏನಿದು ಘಟನೆ?
ಹಿರಿಯ ಪೊಲೀಸ್ ಅಧಿಕಾರಿ ಈ ಕುರಿತು ಮಾಹಿತಿ ಕೊಟ್ಟಿದ್ದು, ಯೂಟ್ಯೂಬ್‍ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಮತ್ತು 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‍ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ತಿಳಿಸಿದ್ದಾರೆ.
Advertisement
ಸುಭಾಷ್ ತನ್ನ ಕಿರಿಯ ಮಗಳ ವರ್ತನೆಯ ಬದಲಾವಣೆಗಳನ್ನು ಅನುಮಾನಿಸಿದ್ದು, ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆ ಎಂದು ನಂಬಿದ್ದಾನೆ. ಈ ಹಿನ್ನೆಲೆ ದುಷ್ಟ ಶಕ್ತಿಯನ್ನು ಓಡಿಸಬೇಕು ಎಂದು ಮೂಢನಂಬಿಕೆ ಹಿಂದೆ ಬಿದ್ದಿದ್ದಾರೆ.
Advertisement
ಈ ಹಿನ್ನೆಲೆ ರಾತ್ರಿ ಇಡೀ ಬಾಲಕಿಗೆ ಪೋಷಕರು ಮತ್ತು ಚಿಕ್ಕಮ್ಮ ದುಷ್ಟ ಶಕ್ತಿ ಓಡಿಸಬೇಕು ಎಂದು ಕೆಲವು ಪೂಜೆ ಮಾಡಿದ್ದು, ಆಕೆಗೆ ಚೆನ್ನಾಗಿ ಹೊಡೆದಿದ್ದಾರೆ. ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ಕ್ಲಿಪ್ ಪೊಲೀಸರಿಗೆ ಸಿಕ್ಕಿದ್ದು, ಆರೋಪಿಗಳು ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಆದರೆ ಆ ಪುಟ್ಟ ಬಾಲಕಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೆ ಉತ್ತರಿಸಲಿಲ್ಲ. ಈ ವೇಳೆ ಮೂವರು ಬಾಲಕಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ನಂತರ ಅವಳು ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ ಎಂದು ವಿವರಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಿಟ್ಟು ಪೋಷಕರು ಪರಾರಿ
ಆರೋಪಿಗಳು ಬೆಳಗ್ಗೆ ಬಾಲಕಿಯನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಅವರ ಕಾರಿನ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಓದಿದ್ರೂ ಅತ್ಯಾಚಾರ ಮಾಡಲು ಸಹಾಯ – ಕೃತ್ಯದ ವೀಡಿಯೋ ಅತ್ತೆಗೆ ಕಳಿಸಿದ ಕಿರಾತಕರು
ಪೊಲೀಸರು ತನಿಖೆ ಮಾಡಿದ್ದು, ಕಾರಿನ ಫೋಟೋದಿಂದ ಆರೋಪಿಗಳನ್ನು ಗುರುತಿಸಲಾಗಿದೆ. ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಗೆ ತಲುಪಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.