ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಹುಕ್ಕಾ ಮಾರಾಟ ದಂಧೆ ಎಗ್ಗಿಲ್ಲದೇ ನಡೀತಿದೆ. ಅಪ್ರಾಪ್ತ ಬಾಲಕರಿಗೆ ಯಾಮಾರಿಸಿ ಶಾಲೆಯ ಆವರಣದಲ್ಲೇ ರಾಜಾರೋಷವಾಗಿ ಹುಕ್ಕಾ ಮಾರಾಟ ಮಾಡ್ತಿದ್ದಾರೆ.
ಶಹಬಾದ್ ನಿವಾಸಿ ರಿಜ್ವಾನ್ ಎಂಬವನು ಈ ದಂಧೆ ನಡೆಸುತ್ತಿದ್ದು, ಮಕ್ಕಳಿಂದ 1 ಸಾವಿರದಿಂದ 1200 ರೂಪಾಯಿಗೆ ಮಾರಾಟ ಮಾಡ್ತಿದ್ದಾನೆ. ಹುಕ್ಕಾ ಚಟಕ್ಕೆ ಬಿದ್ದಿರುವ ಮಕ್ಕಳು ಅಪ್ಪನ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಮನೆಯಲ್ಲಿನ ದುಡ್ಡು ಕಳ್ಳತನದಿಂದ ಅನುಮಾನಗೊಂಡ ಪೋಷಕರು ಫಾಲೋ ಮಾಡಿದಾಗ ಆರೋಪಿ ರಿಜ್ವಾನ್‍ನ ಅಸಲಿ ಬಣ್ಣ ಬಯಲಾಗಿದೆ.
Advertisement
Advertisement
ಹುಕ್ಕಾ ಮಾರಾಟ ಮಾಡಲು ಬಾಲಕರನ್ನೇ ಆರೋಪಿ ಟಾರ್ಗೆಟ್ ಮಾಡಿದ್ದನು. ಯಾಕಂದ್ರೆ ಈ ಹಿಂದೆ ಕೆಲ ಹುಡುಗರು ಅಲ್ಲಿ ಹುಕ್ಕಾ ಖರೀದಿ ಮಾಡಿದ್ದರು. ಆ ಬಳಿಕ ಶಾಲಾ ಮಕ್ಕಳಿಗೆ ಅದರ ರುಚಿ ತೋರಿಸಿದ್ದಾನೆ. ಇದರಿಂದ ಪ್ರೇರೇಪಣೆಗೊಂಡ ಶಹಬಾಜ್ ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹುಕ್ಕಾ ಖರೀದಿ ಮಾಡಿ ಸೇವನೆ ಮಾಡಲು ಆರಂಭಿಸಿದ್ರು. ಇತ್ತ ಪ್ರತಿನಿತ್ಯ ಮನೆಯಲ್ಲಿ ಹಣ ಕಳ್ಳತನವಾಗುತ್ತಿರುವುದನ್ನು ಮನಗಂಡ ಪೋಷಕರು ತಮ್ಮ ಮನೆಯ ಬಾಲಕರನ್ನು ಫಾಲೋ ಮಾಡಿದ್ದಾರೆ. ಈ ವೇಳೆ ಮಕ್ಕಳು ಹುಕ್ಕಾ ಖರೀದಿ ಮಾಡಿ ಸೇವನೆ ಮಾಡುವುದು ಬೆಳಕಿಗೆ ಬಂದಿದೆ.
Advertisement
Advertisement
ಸದ್ಯ ಆರೋಪಿ ರಿಜ್ವಾನ್‍ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಶಹಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಕೂಡ ಮತ್ತೊಂದು ಖಾಸಗಿ ಶಾಲೆಯಲ್ಲಿ ಮೂರು ಹುಕ್ಕಾಗಳು ಪತ್ತೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv