ಮಂಡ್ಯ: ನಾಲ್ಕು ವರ್ಷದ ಮಗು 5 ರೂ. ನಾಣ್ಯ ನುಂಗಿದ್ದರಿಂದ ತಂದೆ-ತಾಯಿ ಆತಂಕದಿಂದ ಮಗುವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ನಡೆದಿದೆ.
ಅಕ್ಮಲ್ ಮತ್ತು ಶಾಜಿಯಾ ದಂಪತಿಯ ಪುತ್ರ ಮಹಮದ್ ನಾಣ್ಯ ನುಂಗಿದ್ದಾನೆ. ಮಗುವಿನ ಕೈಗೆ ಕೊಟ್ಟಿದ್ದರಿಂದ ಆಟವಾಡುತ್ತಾ ಆತ ನಾಣ್ಯವನ್ನು ನುಂಗಿದ್ದಾನೆ. ಇದನ್ನು ನೋಡಿದ ಪೋಷಕರು ಆತಂಕದಿಂದ ಮಗುವನ್ನು ಅಶ್ವಿನಿ ಕ್ಲೀನಿಕ್‍ನ ಡಾಕ್ಟರ್ ಸಿದ್ದರಾಜು ಬಳಿ ಕರೆ ತಂದಿದ್ದಾರೆ.
Advertisement
Advertisement
ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಆತನ ಹೊಟ್ಟೆಯಲ್ಲಿ 5ರೂ. ನಾಣ್ಯವಿರುವುದು ಪತ್ತೆಯಾಗಿದೆ. ಪೋಷಕರಿಗೆ ಸಾಂತ್ವನ ಹೇಳಿದ ವೈದ್ಯರು ಸದ್ಯಕ್ಕೆ ಏನೂ ತೊಂದರೆಯಿಲ್ಲ ಎಂದು ಹೇಳಿ ಎರಡು ದಿನ ಬಿಟ್ಟು ಮತ್ತೆ ಪರೀಕ್ಷೆಗೆ ಬರುವಂತೆ ತಿಳಿಸಿದ್ದಾರೆ.
Advertisement
ಇದೇ ವೇಳೆ ಮಾತನಾಡಿದ ವೈದ್ಯರು, ಮಕ್ಕಳ ಕೈಗೆ ನಾಣ್ಯ ಕೊಡುವುದು ಅಪಾಯಕಾರಿ. ಯಾಕಂದ್ರೆ ಇದನ್ನು ಮಕ್ಕಳು ನುಂಗಿದಾಗ ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv