ಬೆಂಗಳೂರು: ಮನೆಯ ಬಳಿ ನಾಪತ್ತೆಯಾದ ಕಂದಮ್ಮನ ಫೋಟೋ ಹಿಡಿದು ಪೋಷಕರು ಬೀದಿ ಬೀದಿ ಅಲೆಯುತ್ತಾ ಕಣೀರಿಡುತ್ತಿರುವ ಮನ ಮಿಡಿಯುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಂಡ್ರುಗೋಳಿಪುರ ನಿವಾಸಿ, ಮಂಜುನಾಥ್ ಹಾಗೂ ಮಂಗಳಮ್ಮ ತನ್ನ ಮಗನ ಫೋಟೋ ಹಿಡಿದು ನೆಲಮಂಗಲದ ಎಲ್ಲೆಡೆ ಅಲೆಯುತ್ತಿದ್ದಾರೆ. ಜಯರಾಮಕೃಷ್ಣ(7)ನ ಫೋಟೊ ಕೈಯಲ್ಲಿಡಿದು, ನನ್ನ ಮಗನನ್ನು ಹುಡುಕಿಕೊಡಿ ಎಂದು ಬೀದಿ ಬೀದಿಗಳಲ್ಲಿ ಅಂಗಲಾಚುತ್ತಾ ಕಣ್ಣೀರಿಡುತ್ತಿದ್ದಾರೆ.
ಕಳೆದ ನಾಲ್ಕು ದಿನದ ಹಿಂದೆ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಜಯರಾಮಕೃಷ್ಣ ಇದ್ದಕಿದ್ದ ಆಗೆ ನಾಪತ್ತೆಯಾಗಿದ್ದಾನೆ. ಮಗ ಕಾಣೆಯಾದಗಿನಿಂದ ಗಾಬರಿಗೊಂಡ ಹೆತ್ತವರು ಕಳೆದ ನಾಲ್ಕು ದಿನಗಳಿಂದ ಸ್ನೇಹಿತರ ಹಾಗೂ ಸಂಬಂಧಿಗಳ ಮನೆಯಲ್ಲಿ ಹುಡುಕಿದ್ದಾರೆ.
ಆದರೆ ಎಲ್ಲೂ ಸಿಗದ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋದರು. ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಡು ಬಡತನದ ಬೇಗೆಯಿಂದ ಕಂಗೆಟ್ಟಿರುವ ಈ ಕುಟುಂಬ ದಾರಿ ಕಾಣದೆ ಮಗನಿಗಾಗಿ ಪರಿತಪಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv