ಬೆಂಗಳೂರು: ಮರಣಹೊಂದಿದ್ದ ಮಗನ ನೆನಪಿನಲ್ಲಿ ಪೋಷಕರು 10 ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣಕ್ಕೆ ನೆರವಾಗಿ ಸಾಮಾಜಕ್ಕೆ ಮಾದರಿಯಾಗಿದ್ದಾರೆ.
ನೆಲಮಂಗಲ ತಾಲೂಕಿನ ಟಿ.ಬೇಗೂರು ನಿವಾಸಿಗಳಾದ ಪಾಪಣ್ಣ ಹಾಗೂ ರಾಧಮ್ಮ ತಮ್ಮ ಮಗ ಮೋಹನ್ ನೆನಪಿನಲ್ಲಿ 10 ಮಕ್ಕಳನ್ನು ದತ್ತು ಪಡೆದಿದ್ದಾರೆ. ಸಮಾಜಸೇವೆ ಹಾಗೂ ಗ್ರಾಮದ ಬದಲಾವಣೆಯಲ್ಲಿ ಸದಾ ಮುಂದಾಗಿದ್ದ ಮೋಹನ್ ಅವರು ಆದಿಚುಂಚನಗಿರಿ ರಥೋತ್ಸವದ ಕಾಲ್ತುಳಿತದಲ್ಲಿ ಮರಣಹೊಂದಿದ್ದರು. ಹೀಗಾಗಿ ಮೋಹನ್ ಹೆತ್ತವರು ಸಾಕಷ್ಟು ನೊಂದಿದ್ದರೂ ಸಮಾಜಸೇವೆ ಮೂಲಕ ಮಗನನ್ನು ಕಾಣಲು ಮುಂದಾಗಿದ್ದಾರೆ.
- Advertisement 2-
- Advertisement 3-
ಸಮಾಜ ಸೇವೆಯನ್ನು ಸದಾ ತೊಡಗಿರುತ್ತಿದ್ದ ಮೋಹನ್ ಅಗಲಿಕೆ ಬಳಿಕ ಅವರ ಅಣ್ಣ ಹರೀಶ್ ಆರ್ ಪಿ ಅವರು ‘ಮೋಹನ್ ಆರ್ ಪಿ ಫೌಂಡೇಶನ್’ನನ್ನು ಸ್ಥಾಪಿಸಿ, ಅದರ ಮೂಲಕ ಸಮಾಜ ಸೇವೆ ಮಾಡಲು ಆರಂಭಿಸಿದರು. ಇದಕ್ಕೆ ಮೋಹನ್ ತಂದೆ, ತಾಯಿ ಕೂಡ ಸಾಥ್ ಕೊಡುತ್ತಿದ್ದಾರೆ.
- Advertisement 4-
ಟಿ. ಬೇಗೂರಿನ ಮೂರು ಶಾಲೆಯ ವಿದ್ಯಾರ್ಥಿಗಳಾದ ಕವಿತ, ವೇದ, ಸಿಂಚನ, ಪೂಜಾ, ಯಮುನಾ, ಮಿಥುನ್, ಗಗನ್, ಮನೋಜ್ ಸೇರಿದಂತೆ 10 ಬಡ ವಿದ್ಯಾರ್ಥಿಗಳನ್ನು ಮೋಹನ್ ಪೋಷಕರು ದತ್ತು ಪಡೆದಿದ್ದಾರೆ. ಈ ಮಕ್ಕಳಿಗೆ 1 ರಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಬರಿಸುವ ಹೊಣೆಯನ್ನು ಮೋಹನ್ ಆರ್.ಪಿ ಫೌಂಡೇಶನ್ ವಹಿಸಿಕೊಂಡು ಎಲ್ಲರಿಗೂ ಮಾದರಿಯಾಗಿದೆ.
ಮಕ್ಕಳನ್ನು ದತ್ತು ಪಡೆಯುವ ಸಂದರ್ಭದಲ್ಲಿ ಮೋಹನ್ ಆರ್.ಪಿ ಫೌಂಡೇಶನ್ ಸಂಸ್ಥಾಪಕ ಹರೀಶ್ ಆರ್ ಪಿ, ನೆಹರು ಯುವ ಕೇಂದ್ರದ ಎನ್.ವೈ.ವಿ ವಿಜಯ್ ಹೊಸಪಾಳ್ಯ, ನಂದನ್, ಲಕ್ಷ್ಮಣ್, ಗಿರೀಶ್, ಮುನಿರಾಜು, ಕಿರಣ್, ನಟರಾಜ್, ರಕ್ಷಿತ್, ನಾಗರಾಜ್, ಶಾಲೆಯ ಮಕ್ಕಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ತಾಲೂಕಿನ ಟಿ. ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ‘ಮೋಹನ್ ಆರ್ ಪಿ ಫೌಂಡೇಶನ್’ನಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಶಿಕ್ಷಕಿ ಮಾತನಾಡಿದರು. ಸಮಾಜದಲ್ಲಿ ಸ್ವಾರ್ಥವಿಲ್ಲದೆ ಸೇವೆ ಮಾಡಿದವರು ಮರಣ ಹೊಂದಿದ ನಂತರವೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸೇವೆ ಮಾಡುವ ಪ್ರತಿಯೊಬ್ಬರೂ ಜನರ ಮನಸ್ಸಿನಲ್ಲಿ ಸದಾ ಕಾಲ ಉಳಿಯುತ್ತಾರೆ. ಟಿ.ಬೇಗೂರಿನ ಮೋಹನ್ ಕೂಡ ಅದಕ್ಕೆ ಉದಾಹರಣೆಯಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿ ಗ್ರಾಮ ಹಾಗೂ ಸಮಾಜದ ಅಭಿವೃದ್ಧಿಯ ಅಪಾರ ಕನಸುಗಳ ಜೊತೆ ಸಕಾರ ಮಾಡಿದ ವ್ಯಕ್ತಿ ನಮ್ಮ ಜೊತೆ ಇಲ್ಲದಿರುವುದು ದುಃಖವಾಗಿದೆ. ಆದರೆ ಆವರ ಹೆಸರಿನಲ್ಲಿ ಅನೇಕ ಸ್ನೇಹಿತರು, ಕುಟುಂಬಸ್ಥರು ಸಮಾಜಮುಖಿ ಕೆಲಸ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.