– ಫೊರೆನ್ಸಿಕ್ ಗೇಟ್ ಅನಾಲೀಸಿಸ್ ನಲ್ಲಿ ಸಾಬೀತು
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ(ಸೆ.5)ಕ್ಕೆ ಬರೋಬ್ಬರಿ ಒಂದು ವರ್ಷ ಭರ್ತಿಯಾಗುತ್ತಿದ್ದು, ಈ ಹಂತದಲ್ಲಿ ಹತ್ಯೆ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಗೌರಿಯನ್ನು ಗುಂಡಿಟ್ಟು ಕೊಂದಿದ್ದು ಪರಶುರಾಮ್ ವಾಗ್ಮೋರೆ ಅಂತ ಎಸ್‍ಐಟಿ ಸಾಬೀತುಪಡಿಸಿದೆ.
ಕೇವಲ 6 ಸೆಕೆಂಡ್‍ನ ಫೂಟೇಜ್ ಹಿಡಿದು ಎಸ್‍ಐಟಿ ಈ ಆರೋಪವನ್ನು ಸಾಬೀತು ಮಾಡಿದೆ. `ಫೊರೆನ್ಸಿಕ್ ಗೇಟ್ ಅನಾಲೀಸಿಸ್’ ಟೆಕ್ನಿಕ್ ಮೂಲಕ ತಾಂತ್ರಿಕವಾಗಿ ಈ ಆರೋಪ ಸಾಬೀತಾಗಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ ಮತ್ತು ಕ್ರೈಮ್ ಸೀನ್ ಮರುಚಿತ್ರೀಕರಣದ ವಿಡಿಯೋ ಮ್ಯಾಚಾಗುತ್ತಿತ್ತು. ಹೆಲ್ಮೆಟ್ ಧರಿಸಿದ್ದರೂ ಬೈಕ್‍ನಲ್ಲಿ ಇದ್ದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಸ್ಪಷ್ಟವಾಗಿದ್ದು, ಗುಜರಾತ್‍ನ ವಿಧಿವಿಜ್ಞಾನ ಪ್ರಯೋಗಾಲಯ ಈ ವರದಿ ನೀಡಿದೆ. ಇದನ್ನೂ ಓದಿ: ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್
Advertisement
Advertisement
ಭಾರತದಲ್ಲಿ ಇದೇ ಮೊದಲ ಬಾರಿಗೆ ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಟೆಕ್ನಿಕ್ ಬಳಕೆ ಮಾಡಲಾಗಿದೆ. ಈ ಟೆಕ್ನಿಕ್ ಮೂಲಕ ಆರೋಪಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿರುವುದು ಸ್ಪಷ್ಟವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ಸಾಬೀತಾದ ಮೊದಲ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿ 18 ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಟೆಕ್ನಿಕ್ ಬಳಸಲಾಗಿತ್ತು. ಇದ್ರೊಂದಿಗೆ ಎಸ್‍ಐಟಿ ಇದೀಗ ಗೌರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಇದನ್ನೂ ಓದಿ: ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!
Advertisement
ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಎಂದರೇನು? ಪತ್ತೆ ಹಚ್ಚುವುದು ಹೇಗೆ?
ಪರಶುರಾಮ್ ವಾಗ್ಮೋರೆ ಬಂಧನಕ್ಕೂ ಮೊದಲು ಸಿಸಿಟಿವಿ ಆಧರಿಸಿ ಆರೋಪಿ ಎತ್ತರದ ನಕಲಿ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಹೋಗಿ ಗೌರಿ ಹತ್ಯೆಯ ಅನಾಲಿಸಿಸ್ ಮಾಡಲಾಗಿತ್ತು. ಈ ವೇಳೆ ಆರೋಪಿಯ ಎತ್ತರ 5.2 ಅಡಿ ಎಂಬ ಸುಳಿವು ದೊರಕಿತ್ತು. ನಂತರ ಆತನ ಶೂ ಮತ್ತು ಹೆಲ್ಮೆಟನ್ನು ಹಾಕಿಕೊಂಡ್ರೆ 5.3ರಿಂದ 5.4ರಷ್ಟು ಆರೋಪಿಯ ಎತ್ತರ ಬರುತ್ತೆ ಅಂತ ಅನಾಲಿಸಿಸ್ ಮಾಡಲಾಗಿತ್ತು. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ
Advertisement
ಬಳಿಕ ಬೇರೆ ಬೇರೆ ಸುಳಿವುಗಳ ಮೂಲಕ ಅಮೊಲ್ ಕಾಳೆ, ಸಜಿತ್ ಹಾಗೂ ಅಮಿತ್ ಮೊದಲಾದವರ ಹೇಳಿಕೆಗಳನ್ನು ಆಧರಿಸಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸುತ್ತಾರೆ. ಬಂಧನದ ಬಳಿಕ ಘಟನಾ ಸ್ಥಳಕ್ಕೆ ವಾಗ್ಮೊರೆಯನ್ನು ಕರೆದುಕೊಂಡು ಹೋಗಿ ಆತನಿಗೆ ಶೂ ಹಾಗೂ ಹೆಲ್ಮೆಟ್ ಹಾಕಿ, ಬೈಕ್ ಓಡಿಸುವ ಮೂಲಕ ಪ್ರಕರಣವನ್ನು ಮರುಸೃಷ್ಟಿ ಮಾಡಲಾಗಿತ್ತು. ಈ ಘಟನೆಯನ್ನು ಗೌರಿ ಮನೆಯಲ್ಲಿರುವ ಕೇವಲ ಎರಡು ಸಿಸಿಟಿವಿಯಲ್ಲಿ ಮಾತ್ರ ಸೆರೆಹಿಡಿಯಲಾಗಿತ್ತು. ಅದರಲ್ಲಿ ಆತ ಶೂ, ಹೆಲ್ಮೆಟ್ ತೆಗೆಯುವತಂಹ ರೀತಿಯನ್ನೂ ಸೆರೆಹಿಡಿಯಲಾಗಿತ್ತು. ಹೀಗಾಗಿ ಹೆಲ್ಮೆಟ್ ಇಲ್ಲದೆ, ಶೂ ಇಲ್ಲದೇ ಮರು ಸೃಷ್ಟಿ ಮಾಡಿದಾಗಲೂ ವಿಡಿಯೋ ಹೊಂದಾಣಿಕೆ ಕಂಡಿತ್ತು.
ಈ ಮೂಲಕ ಪ್ರಕರಣದ ಘಟನೆಯನ್ನು ಮರುಸೃಷ್ಟಿ ಮಾಡಿ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕೊಡಲಾಗಿತ್ತು. ಇಲ್ಲಿ ಪ್ರತಿಯೊಂದು ಚಲನವಲನವನ್ನು ಗಮನಿಸಲಾಯಿತು. ಈ ವೇಳೆ ವಾಗ್ಮೋರೆಯೇ ಹಂತಕ ಅನ್ನೋ ಸ್ಪಷ್ಟ ಚಿತ್ರಿಕರಣವನ್ನು ಗುಜರಾತಿನ ವಿಧಿವಿಜ್ಞಾಲಯ ವರದಿ ನೀಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=enMwHOKcDts